ಜ್ಯೂ.ಎನ್.ಟಿ.ಆರ್ ಜೊತೆ ನಟಿಸಲು ರಶ್ಮಿಕಾ ಮಂದಣ್ಣ ಕೇಳಿದ್ದೆಷ್ಟು ಕೋಟಿ?!

rfinal (3)
Published on

ಭಾರತೀಯ ಚಿತ್ರರಂಗದಲ್ಲಿ ಈಗ ದಕ್ಷಿಣ ಭಾರತದ ನಟಿಯರದ್ದೇ ಕಾರುಬಾರು. ಅದರಲ್ಲೂ ಬಾಲಿವುಡ್ ಸಿನಿಮಾಗಳಿಗೆ ಸೌತ್ ಸುಂದರಿಯರೇ ಬೇಕು. 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಹಿಂದಿಯ ಮೂರ್ನಾಲ್ಕು ಸಿನಿಮಾಗಳಿಗೆ ಫಿಕ್ಸ್ ಆಗಿದ್ದಾರೆ.

ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್.. ಟಾಲಿವುಡ್‌ನಿಂದ ಕಾಲಿವುಡ್.. ಕಾಲಿವುಡ್‌ನಿಂದ ಮರಳಿ ಟಾಲಿವುಡ್‌ಗೆ ಬಂದು ಆ ನಂತರ ಸೀದಾ ಬಾಲಿವುಡ್​​​​ಗೆ ಹೋದ ರಶ್ಮಿಕಾ ಸಂಭಾವನೆ ಕೂಡ ಚಿತ್ರದಿಂದ ಚಿತ್ರಕ್ಕೆ ಏರುತ್ತಲೇ ಇದೆ. ಅದರಂತೆಯೇ ಇದೀಗ ಕಿರಿಕ್​ ಪಾರ್ಟಿ ನಟಿ ಸಂಭಾವನೇ ಎಷ್ಟಿರಬಹುದು ಅನ್ನೋ ಪ್ರಶ್ನೆ ಸಾಕಷ್ಟು ಜನರ ತಲೆಯಲ್ಲಿರುತ್ತೆ.

ಜ್ಯೂ.ಎನ್.ಟಿ.ಆರ್ ಜೊತೆ ಹೆಜ್ಜೆ ಹಾಕಲು ರಶ್ಮಿಕಾ ಮಂದಣ್ಣ ಒಂದಲ್ಲ..ಎರಡಲ್ಲ.. ಏಳು ಕೋಟಿಯನ್ನ ಕೇಳಿದ್ದಾರೆ ಅನ್ನುವ ಸುದ್ದಿ ಪಕ್ಕದ ಆಂಧ್ರದಲ್ಲಿ ಕೇಳಿ ಬರುತ್ತಿದೆ.

ಕಳೆದ ಕೆಲ ದಿನದ ಹಿಂದೆ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್.ಟಿ.ಆರ್ ಸಮಾಗಮದಲ್ಲಿ ಸಿದ್ಧವಾಗಲಿರುವ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂಬ ಪುಕಾರು ಹಬ್ಬಿತ್ತು. ಜ್ಯೂ.ಎನ್.ಟಿ.ಆರ್ ಅಭಿನಯದ ಈ 31ನೇ ಚಿತ್ರಕ್ಕೆ ಡ್ರ್ಯಾಗನ್ ಎಂಬ ಹೆಸರನ್ನಿಡಲಾಗಿದೆ. ಈ ಆಗಸ್ಟ್ ನಿಂದ ಚಿತ್ರದ ಚಿತ್ರೀಕರಣ ಆರಂಭವೂ ಆಗಲಿದೆ ಎಂಬ ಯಂಗ್ ಟೈಗರ್ ಅಭಿಮಾನಿಗಳ ಖುಷಿಯನ್ನೂ ಹೆಚ್ಚಿಸಿತ್ತು. ಸದ್ಯಕ್ಕೆ ಇದೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಏಳು ಕೋಟಿ ಕೇಳಿದ್ದಾರೆ ಅನ್ನುವುದು ಹರಡಿಕೊಂಡಿರುವ ಲೇಟೆಸ್ಟ್ ವರದಿ.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಪುಷ್ಪ 02 ಚಿತ್ರದ ಬಿಡುಗಡೆಯನ್ನ ಎದುರು ನೋಡುತ್ತಿದ್ದಾರೆ. ನಿಮಗೆ ಗೊತ್ತು ಈ ಚಿತ್ರದಲ್ಲಿ ಇವರದ್ದು ಇಲ್ಲಿ ಡಿಗ್ಲ್ಯಾಮ್‌ ಪಾತ್ರ. ಇನ್ನೂ ರಶ್ಮಿಕಾ ಅವರ ಈ ಲುಕ್‌ನ ಇವರ ಅಭಿಮಾನಿ ಬಳಗ ಮೆಚ್ಚಿಕೊಂಡಿದೆ.

ಸದ್ಯ ಕಿರಿಕ್​ ಪಾರ್ಟಿ ಕ್ವೀನ್​ ರಶ್ಮಿಕಾ ಸಂಭಾವನೆ ಎಷ್ಟಿರಬಹುದು ಅನ್ನೋ ಅನುಮಾನವಿದ್ದವರಿಗೆ ಸದ್ಯ ಅವರ ಸಂಭಾವನೆ ಬಗ್ಗೆ ಒಂದು ಐಡಿಯಾ ಸಿಕ್ಕಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net