ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್​ ಸಮಾರೋಪ ಸಮಾರಂಭಕ್ಕೆ ರಶ್ಮಿಕಾ ಮಂದಣ್ಣ!​

ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್​ ಸಮಾರೋಪ ಸಮಾರಂಭಕ್ಕೆ ರಶ್ಮಿಕಾ ಮಂದಣ್ಣ!​
ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್​ ಸಮಾರೋಪ ಸಮಾರಂಭಕ್ಕೆ ರಶ್ಮಿಕಾ ಮಂದಣ್ಣ!​
Published on
ಗ್ಲಾಸ್ಗೋ: ಮುಂದಿನ ಕಾಮನ್ವೆಲ್ತ್​ ಗೇಮ್ಸ್​ ಭಾರತದಲ್ಲಿ 2030ರಲ್ಲಿ ನಡೆಯಲಿದೆ. ಹೀಗಾಗಿ ಈ ಸಲದ ಸಮಾರೋಪ ಸಮಾರಂಭದಲ್ಲಿ (ಆಗಸ್ಟ್​ 2) ಭಾರತಕ್ಕೆ ಕಾಮನ್ವೆಲ್ತ್​ ಧ್ವಜವನ್ನು ಹಸ್ತಾಂತರಿಸಲಾಗುತ್ತದೆ. ಈ ವೇಳೆ ನಡೆಯಲಿರುವ ಸಾಂಸತಿಕ ಮತ್ತು ಭಾರತಕ್ಕೆ ಕ್ರೀಡಾಪಟುಗಳನ್ನು ಸ್ವಾಗತಿಸುವ ಸಮಾರಂಭ ನಟಿ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಗಾಯಕ ಶಂಕರ್​ ಮಹಾದೇವನ್​ ಕಾರ್ಯಕ್ರಮ ನೀಡಲಿದ್ದಾರೆ. ಸುಮಾರು 20 ನಿಮಿಷಗಳ ಕಾರ್ಯಕ್ರಮದಲ್ಲಿ ಭಾರತದ ಹಲವು ಕಲಾವಿದರು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಮಾರಂಭದಲ್ಲಿ ಹಾಜರಿರುವ ನಿರೀಕ್ಷೆ ಇದೆ.
ಆರಂಭೋತ್ಸವಕ್ಕೆ ಪಾಪ್​  ತಾರೆಯರ ಆಕರ್ಷಣೆ
ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಸಂಪೂರ್ಣವಾಗಿ ಒಳಾಂಗಣದಲ್ಲಿ ನಡೆಯಲಿದ್ದು, ಗುರುವಾರ ರಾತ್ರಿ ನಡೆಯಲಿರುವ ಸಮಾರಂಭಕ್ಕೆ ಸ್ಕಾಟಿಷ್​ ಪಾಪ್​ ಗಾಯಕಿ-ಸಂಗೀತ ನಿರ್ದೇಶಕಿ ಕೆ.ಟಿ. ಟನ್​ಸ್ಟಾಲ್​ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಟಾಮ್​ ವಾಲ್ಕರ್​, ಕ್ಯಾಲಮ್​ ಬೀಟಿ, ನೀನಾ ನೆಸ್ಬಿಟ್​, ನಾಥನ್​ ಇವಾನ್ಸ್​, ಸೇಂಟ್​ ಫ್ನಾಕ್ಸ್​ ಅವರ ಪ್ರದರ್ಶನಗಳೂ ನಡೆಯಲಿವೆ.

ಬ್ರಿಟನ್​ ರಾಜ ಚಾರ್ಲ್ಸ್​ ಮತ್ತು ರಾಣಿ ಕ್ಯಾಮಿಲ್ಲಾ ಭಾಗವಹಿಸಲಿದ್ದಾರೆ. ಕಿಂಗ್ಸ್​ ಬ್ಯಾಟನ್​ ಸಂದೇಶವನ್ನು ಓದುವ ಮೂಲಕ ರಾಜರು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಕ್ರೀಡಾಪಟುಗಳ ಪಥ ಸಂಚಲನವೂ ಇರಲಿದ್ದು, ವೇಯ್ಟ್​ ಲಿಫ್ಟರ್​ ಮೀರಾಬಾಯಿ ಚಾನು ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಬಾಕ್ಸರ್​ ಲವ್ಲಿನಾ ಬ್ಯಾಟನ್​ ಹಿಡಿಯಲಿದ್ದಾರೆ. 

*ಉದ್ಘಾಟನಾ ಸಮಾರಂಭ ಆರಂಭ: ರಾತ್ರಿ 10.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net