

ಬೆಂಗಳೂರು: ಪ್ರಪಂಚದಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ ಎಂಬುದನ್ನು ನಾವು-ನೀವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಈಗಾಗಲೇ ಐಶ್ವರ್ಯಾ ರೈ, ಅನುಷ್ಕಾ ಶರ್ಮಾ, ಪ್ರಿಯಾಂಕ ಚೋಪ್ರಾ, ಶಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಟೈಗರ್ ಶ್ರಾಫ್ ರೀತಿ ಇರುವವರನ್ನು ನೋಡಿದ್ದೇವೆ. ಅಷ್ಟೇ ಏಕೆ ಡಾ. ರಾಜ್ಕುಮಾರ್, ವಿಷ್ಣುವರ್ಧನ್, ರವಿಚಂದ್ರನ್, ಶಂಕರ್ನಾಗ್ರನ್ನು ಹೋಲುವವರನ್ನು ನೋಡಿ ಆಶ್ಚರ್ಯ ಪಟ್ಟಿದ್ದೇವೆ. ತುಂಬಾ ಹೋಲಿಕೆ ಇಲ್ಲದಿದ್ದರೂ ಬಹುತೇಕ ಅವರಂತೆ ಕಾಣುತ್ತಾರೆ.
ಇತ್ತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿ ಮೂಡಿ ಬಂದ ಮಜಾ ಭಾರತ ಕಾರ್ಯಮದಲ್ಲಿ ದರ್ಶನ್ ತದ್ರೂಪಿಯನ್ನು ನೋಡಿ ಖುಷಿಪಟ್ಟವರೆಷ್ಟೋ? ಇದೀಗ ಥೇಟ್ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣರನ್ನೇ ಹೋಲುವ ಯುವತಿಯೊಬ್ಬಳು ಟಿಕ್ಟಾಕ್ನಲ್ಲಿ ಎದುರಾಗಿದ್ದಾರೆ. ರಶ್ಮಿಕಾ ಚಿತ್ರದ ದೃಶ್ಯಗಳಿಗೆ ಲಿಪ್ಸಿಂಕ್ ಮಾಡಿ ನಟಿಸಿದ್ದು, ಆಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹಜೆಲ್ಔಟ್ಫೈರ್ (Hazeloutfire) ಹರ್ಶು ಆಲ್ವೇಸ್ (Harshualways) ಹೆಸರಿನ ಟಿಕ್ಟಾಕ್ ಖಾತೆಯಲ್ಲಿ ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದು, ಈವರೆಗೂ 3 ಮಿಲಿಯನ್ (30 ಲಕ್ಷ) ಲೈಕ್ಸ್ಗಳನ್ನು ಗಿಟ್ಟಿಸಿಕೊಂಡಿದ್ದಾರೆ. ರಶ್ಮಿಕಾ ತದ್ರೂಪಿಯ ವೈರಲ್ ಟಿಕ್ಟಾಕ್ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದಾಗಿದೆ.