ಇದೇ ನೋಡಿ ನಮ್ಮ Someಕಲ್ಪ: ರಶ್ಮಿಕಾ ಮಂದಣ್ಣ ಸಿನಿಮಾ ಸಂಕಲ್ಪ ಇದಾಗಿರಬಹುದಾ?

Rashmik 1 jan 20
Published on

ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

ರಶ್ಮಿಕಾ ಮಂದಣ್ಣ

ನಾಯಕಿಯಾದರೆ ರಶ್ಮಿಕಾ ಮಂದಣ್ಣ, ಆ ಚಿತ್ರ ಗಳಿಕೆಯಲ್ಲಿ ಸದಾ ಮುಂದಣ್ಣ ಎಂಬ ಖ್ಯಾತಿಯನ್ನು ಈ ವರ್ಷವೂ ಉಳಿಸಿಕೊಳ್ಳುವುದು ನನ್ನ ವಿಶ್, ಐ ಮೀನ್, ಸಂಕಲ್ಪ. ಸದ್ಯ ನನ್ನ ಆಯ್ಕೆ ತೆಲುಗು. ಅವರು ಇಲ್ಲಿಂದ ತೊಲಗು ಅಂದರೆ ಪುನಃ ಕನ್ನಡಕ್ಕೆ ಬಂದು ನಿಮಗೆಲ್ಲಾ ಕಿರಿಕ್ ಮಾಡ್ತೀನಿ. ತೆಲುಗಿನಲ್ಲಿ ನನ್ನ ಗೀತಾ ಗೋವಿಂದ ಸೂಪರ್ ಹಿಟ್ ಆಯ್ತು. ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣ ಕೂಡಾ ಹಿಟ್ ಆಗಲಿ ಅಂತ ಹಾರೈಸ್ತೀನಿ. ಗೋವಿಂದ ಮತ್ತು ನಾರಾಯಣ ಬೇರೆಯಲ್ಲ. ಆದರೆ ನಾನು ಮತ್ತು ರಕ್ಷಿತ್ ಪರಸ್ಪರ ಹೊಂದಾಣಿಕೆ ಇಲ್ಲ ಅಂತ ಈಗಾಗಲೇ ಬೇರಾ ಗಿರುವುದರಿಂದ ಮತ್ತೆ ಒಂದಾಗುವ ಚಾನ್ಸ್​ಇಲ್ಲ ಅನ್ಸುತ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net