ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿ ರಶ್ಮಿಕಾ ಆಯ್ಕೆ

Rashmika Mandanna
Published on

ಮುಂಬೈ: ನಟಿ ರಶ್ಮಿಕಾ ಮಂದಣ್ಣ ವಿಭಿನ್ನವಾದ ನಟನಾಶೈಲಿ ಮೂಲಕವಾಗಿ ಅಪಾರ ಪ್ರಮಾಣದ ಅಭಿಮಾನಿಗಳ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇದೀಗ ಅವರಿಗೆ ಹೊಸ ಅವಕಾಶ ದೊರೆತಿದೆ. ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿದ್ದಾರೆ.

'ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್' ಗೆ ರಶ್ಮಿಕಾ ರಾಯಭಾರಿಯಾಗಿದ್ದಾರೆ. ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿ ಎನ್ನುವ ಹೆಗ್ಗಳಿಕೆಗೆ ರಶ್ಮಿಕಾ ಪಾತ್ರರಾಗಿದ್ದಾರೆ.

ಐಕಾನಿಕ್ ಜಪಾನೀಸ್ ಫ್ಯಾಶನ್ ಬ್ರ್ಯಾಂಡ್ ಒನಿಟ್ಸುಕಾ ಟೈಗರ್​ಗೆ ನಾನು ಈಗ ಭಾರತದ ಮೊದಲ ರಾಯಭಾರಿ ಎಂದು ಘೋಷಿಸಲು ತುಂಬಾ ಸಂತೋಷವಾಗುತ್ತದೆ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಕಾಮೆಂಟ್​​ ಮಾಡುವ ಮೂಲಕವಾಗಿ ಶುಭಕೊರುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಈ ಬಾರಿ ಮಿಲನ್ ಫ್ಯಾಶನ್ ವೀಕ್‍ನಲ್ಲಿ ಭಾಗವಹಿಸಿದ್ದರು. ಅಲ್ಲೂ ಅದೇ ಬ್ರ್ಯಾಂಡ್ ಬಟ್ಟೆಗಳನ್ನು ಧರಿಸಿದ್ದರು. ಸ್ಯಾಂಡಲ್‍ವುಡ್, ಟಾಲಿವುಡ್​​ನಲ್ಲಿ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net