ನಳಪಾಕದಲ್ಲಿ ಕಳೆಗಟ್ಟಿದ ಸುಗ್ಗಿ ಸಂಭ್ರಮ; ಕಿರುತೆರೆಯ ಪ್ರಮುಖ ತಾರೆಯರು ಭಾಗಿ

ನಳಪಾಕ
Published on

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿಯ ಸುಪ್ರಸಿದ್ಧ ಹೋಟೆಲ್ ನಳಪಾಕದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ 'ರಾಶಿ' ಕಾರ್ಯಕ್ರಮವನ್ನು ಕವಿತಾ ಹಾಗೂ ಲಿಂಗಯ್ಯ ಕಾಡದೇವರಮಠ ದಂಪತಿಗಳ ನೇತೃತ್ವದಲ್ಲಿ ನಡೆಯಿತು.

ನಿವೃತ್ತ ಐಎಎಸ ಅಧಿಕಾರಿ ಚಿ.ಸೋಮಶೇಖರ್​ ಅವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ತೆರಿಗೆ ಇಲಾಖೆಯ ಅಧಿಕಾರಿಗಳಾದ ಶ್ರೀನಿವಾಸ ಬಿದರಿ ಮತ್ತು ಪ್ರಕಾಶ ತವಶಿ, ಕಲಾವಿದರಾದ ನಾಗೇಂದ್ರ ಶಾ, ಮಾಲತಿ ಮತ್ತು ಡಾ.ಯಶವಂತ್ ಸರ್​ದೇಶಪಾಂಡೆ, ಶ್ರೀವಿದ್ಯಾ - ಗಣೇಶ ಜೋಡಿ, ಸಂಜು ಬಸಯ್ಯ - ಪಲ್ಲವಿ ಜೋಡಿ, ಆನಂದ್-ಚೈತ್ರಾ ಜೋಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕವಿತಾ ಕಾಡದೇವರಮಠ ಅವರ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಉತ್ಕೃಷ್ಟ ಉತ್ತರ ಕರ್ನಾಟಕದ ಊಟ ತಿನುಸುಗಳನ್ನು ನೀಡುತ್ತಿರುವ ನಳಪಾಕ ಮುಂಬರುವ ಏಪ್ರಿಲ್​​ನಲ್ಲಿ ಬೆಳ್ಳಿ ಹಬ್ಬ ಆಚರಿಸಲಿದೆ. ಇಂದಿನ ಸಂಕ್ರಾಂತಿ ಸಿಹಿ ಭೋಜನ ಸವಿದ ಅತಿಥಿಗಳು, ಕಲಾವಿದರು ಮತ್ತು ಅಧಿಕಾರಿಗಳು ಬಾಯಿತುಂಬ ಊಟವನ್ನು ಹೊಗಳಿದರು ಅಷ್ಟೇ ಪಾರ್ಸಲ್ ಕಟ್ಟಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಮಧ್ಯಾಹ್ನ 4:30ಕ್ಕೆ ಡಾ. ಯಶವಂತ್ ಸರ್​​​ದೇಶಪಾಂಡೆಯವರ 'ರಾಶಿಚಕ್ರ' ಏಕವ್ಯಕ್ತಿ ಹಾಸ್ಯ ರಂಗಪ್ರಯೋಗ ಪ್ರಸ್ತುತವಾಯಿತು. ಸರ್​​​ದೇಶಪಾಂಡೆಯವರ ಹಾಸ್ಯ ಮಾತುಗಳಿಗೆ ತಲೆದೂಗಿದ ಪ್ರೇಕ್ಷಕರು ನಕ್ಕು ನಕ್ಕು ಸುಸ್ತಾದರು.

ಲಿಂಗಯ್ಯನವರ ಆದರಾತಿಥ್ಯ, ಕವಿತಾ ಅವರ ಅಡುಗೆ ರುಚಿ ಸವೆದ ಬೆಂಗಳೂರಿಗರು ನಾಳೆ ನಾಡಿದ್ದು ಬಂಧು ಬಾಂಧವರೊಂದಿಗೆ ಮತ್ತೆ ಬರುತ್ತೇವೆ ಎಂದು ಹೇಳಿದ್ದಾರೆ. ಹೌದು ಹೋಟೆಲ್ ನಳಪಾಕದಲ್ಲಿ ಸಂಕ್ರಾಂತಿ ಸಿಹಿ ಭೋಜನ ಹಬ್ಬ ಇನ್ನೂ ಮೂರು ದಿನ ನಡೆಯಲಿದೆ, ವಿವರಗಳನ್ನು +91 97399 98521 ನಂಬರ್​ನಿಂದ ಪಡೆದು, ಸ್ಥಳ ಕಾಯ್ದಿರಿಸಬಹುದಾಗಿದೆ.

ನಳಪಾಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net