ಪತ್ತೆಯಾಯ್ತು ಬಂಗಾರದ ಬಣ್ಣದ ಆಮೆ..ಶ್ರೀವಿಷ್ಣುವಿನ ಕೂರ್ಮಾವತಾರದ ಪ್ರತಿರೂಪ ಎಂದ ನೇಪಾಳಿಗಳು

Ame
Published on

ಮಹಾವಿಷ್ಣುವಿನ ಕೂರ್ಮಾವತಾರದ ಪೌರಾಣಿಕ ಕತೆಯನ್ನು ಕೇಳಿಯೇ ಇರುತ್ತೀರಿ. ದೇವತೆಗಳು-ರಾಕ್ಷಸರು ಸಮುದ್ರ ಮಥನ ಮಾಡುವಾಗ ಕುಡುಗೋಲಾದ ಮಂದಾರ ಪರ್ವತ ಕುಸಿಯದಂತೆ ತಡೆಯಲು ಸಾಕ್ಷಾತ್​ ಶ್ರೀ ವಿಷ್ಣು ಕೂರ್ಮಾವತಾರ (ಆಮೆ) ತಾಳಿ, ಬೆನ್ನಿನ ಮೇಲೆ ಬೆಟ್ಟ ಹೊತ್ತುಕೊಂಡ ಕತೆ ಪುರಾಣ ಪ್ರಸಿದ್ಧ. ಇದನ್ನೂ ಓದಿ: ಅವಕಾಶಕ್ಕಾಗಿ ರೋಹಿತ್​ ಹತ್ತಿರ ಕೈಮುಗಿದು ಬೇಡಿಕೊಂಡ್ರಾ ಸಾರಾ?

ಇದೀಗ ವಿಷ್ಣುವಿನ ಅವತಾರವಾಗಿದ್ದ ಆಮೆಯನ್ನೇ ಹೋಲುವಂತಹ..ಬೆರಗುಗೊಳಿಸುವಂತಹ ಬಂಗಾರದ ಬಣ್ಣದ ಆಮೆಯೊಂದು ಪತ್ತೆಯಾಗಿದೆ. ಆಮೆಯನ್ನು ನೋಡಿದವರೆಲ್ಲ ಇದು ದೈವತ್ವ ಅಂಶಗಳನ್ನೊಳಗೊಂಡ ಆಮೆ ಎಂದೇ ಹೇಳುತ್ತಿದ್ದಾರೆ.

ಅಪರೂಪದ ಆನುವಂಶಿಕ ರೂಪಾಂತರ ಕಾರಣದಿಂದ ಹೀಗೆ ಸಂಪೂರ್ಣ ಬಂಗಾರ ಬಣ್ಣ ಹೊಂದಿರುವ ಆಮೆ ಪತ್ತೆಯಾಗಿದ್ದು ನೇಪಾಳದ ಧನುಷಾ ಜಿಲ್ಲೆಯಲ್ಲಿ. ಆಮೆಗಳಿಗೆ ನೇಪಾಳದಲ್ಲಿ ಆಧ್ಯಾತ್ಮಿಕ ಮಹತ್ವ ನೀಡಲಾಗಿದೆ. ಆದರೆ ಈ ಆಮೆ ಇಷ್ಟು ಬಂಗಾರ ಬಣ್ಣಕ್ಕೆ ತಿರುಗಲು ಕಾರಣ ಕ್ರೊಮ್ಯಾಟಿಕ್ ಲ್ಯೂಸಿಸಮ್. ಈ ಸಮಸ್ಯೆ ಉಂಟಾದ ಜೀವಿಗಳಿಗೆ ಚರ್ಮ ಹೊಳಪಾಗುತ್ತದೆ. ಬಿಳಿಬಣ್ಣಕ್ಕೆ ತಿರುಗುತ್ತದೆ. ಇಲ್ಲ, ಮಸುಕಾಗಿ, ತೇವದ ಬಣ್ಣಕ್ಕೆ ತಿರುಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಶುನಾಳ ಶರೀಫ್ ನಮಗೆ ಆದರ್ಶವಾಗಲಿ – ಶಿವಪುತ್ರ ಶಾಸ್ತ್ರಿ

ಜುಲೈನಲ್ಲಿ ಓಡಿಶಾದಲ್ಲೂ ಕೂಡ ಇದೇ ರೀತಿಯ ಹಳದಿ ಬಣ್ಣದ ಆಮೆ ಪತ್ತೆಯಾಗಿತ್ತು. ಆಮೆಯನ್ನು ನೋಡಿದ ತಜ್ಞರು ಇದು ಬಿಳಿಚುವಿಕೆ ಕಾಯಿಲೆ ಹೊಂದಿರಬಹುದು ಎಂದು ಅಂದಾಜಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net