

ನವದೆಹಲಿ: ಡಿಸ್ನಿ ಕಾರ್ಟೂನ್ ಪಾತ್ರವನ್ನೇ ಹೋಲುವ ಆಕ್ಟೋಪಸ್ ಒಂದು ಉತ್ತರ ಪೆಸಿಫಿಕ್ ಸಾಗರದಲ್ಲಿ ಪತ್ತೆಯಾಗಿದೆ. ಇವಿನಾಟಿಲ್ ನೇರಪ್ರಸಾರದ ವೇಳೆ ಈ ಡಂಬೋ ಆಕ್ಟೋಪಸ್ ಕಾಣಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ರಾಷ್ಟ್ರೀಯ ಸ್ಮಾರಕ ಪಾಪಹನುಮೊಕುಕಿಯಾ (PMNM) ಅನ್ವೇಷಣೆ ವೇಳೆ ಈ ಸಮುದ್ರ ಜೀವಿ ಪತ್ತೆಯಾಗಿದೆ. ದೂರದಿಂದಲೇ ಕಾರ್ಯನಿರ್ವಹಿಸುವ ಓಷನ್ ಎಕ್ಸ್‌ಪ್ಲೋರೇಷನ್ ಟ್ರಸ್ಟ್ ವಾಹನದಲ್ಲಿ ಅಳವಡಿಸಲಾಗಿರುವ ಆಳವಾದ ಸಮುದ್ರದ ಕ್ಯಾಮರಾದಿಂದ ಇದನ್ನು ಚಿತ್ರೀಕರಿಸಲಾಗಿದೆ.
ಇದೊಂದು ಅಪರೂಪದ ಆಕ್ಟೋಪಸ್ ಆಗಿದ್ದು, 7 ಸಾವಿರ ಮೀಟರ್ಗೂ ಅಧಿಕ ಆಳದಲ್ಲಿ ಇದು ಜೀವಿಸುತ್ತದೆ. ಇವುಗಳನ್ನು ಸಾಮಾನ್ಯವಾಗಿ ವಿಶ್ವದ ಅತ್ಯಂತ ಮೋಹಕವಾದ ಆಕ್ಟೋಪಸ್‌ಗಳು ಎಂದು ಕರೆಯಲ್ಪಡುತ್ತವೆ. ಏಕೆಂದರೆ ಇವುಗಳು 'ಡಂಬೋ ದಿ ಎಲಿಫೆಂಟ್' ನ ದೊಡ್ಡ ಕಿವಿಗಳಂತೆ ಕಾಣುವ ರೆಕ್ಕೆಗಳನ್ನು ಹೊಂದಿವೆ.
ಇವಿ ನಾಟಿಲಸ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಸಾಗರ ಪರಿಶೋಧನೆಯ ನೇರಪ್ರಸಾರದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಲಿಟಲ್ ಹರ್ಕ್ಯುಲಸ್ ಎಂಬ ರಿಮೋಟ್ ಚಾಲಿತ ವಾಹನದಿಂದ ಸುಮಾರು 2,665 ಮೀಟರ್ ಆಳದಲ್ಲಿ ಆಕ್ಟೋಪಸ್ ಈಜುತ್ತಿದೆ. ವಿಡಿಯೋದಲ್ಲಿ 24 ಸೆಕೆಂಡ್ಗಳ ಕಾಲ ಆಕ್ಟೋಪಸ್ ಕಾಣಿಸಿಕೊಂಡಿದೆ.
ಐಎಫ್ಎಲ್ ವಿಜ್ಞಾನದ ಪ್ರಕಾರ, ಭೂವಿಜ್ಞಾನದ ಜತೆಗೆ ಪ್ರದೇಶದಲ್ಲಿನ ಪ್ರಾಣಿಗಳ ಜಾತಿಗಳ ವಿತರಣಾ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಮಿಷನ್ ಅನ್ನು ಸಮುದ್ರಕ್ಕೆ ತುಂಬಾ ಆಳವಾಗಿ ಕಳುಹಿಸಲಾಗಿದೆ ಎಂದಿದೆ. PMNM ಯುನೈಟೆಡ್ ಸ್ಟೇಟ್ಸ್‌ನ ಅತಿದೊಡ್ಡ ಸಮುದ್ರ ಸಂರಕ್ಷಿತ ಪ್ರದೇಶವಾಗಿದೆ ಎಂದು ನಾಟಿಲಸ್ ಲೈವ್ ವೆಬ್‌ಸೈಟ್ ಹೇಳುತ್ತದೆ.
ಈ ವಿಶೇಷವಾದ ಆಕ್ಟೋಪಸ್ ಅನ್ನು ಕೊನೆಯದಾಗಿ 2020ರಲ್ಲಿ 2.5 ಕಿಲೋಮೀಟರ್ ಆಳದಲ್ಲಿ ನೋಡಲಾಯಿತು. ಇದೀಗ ಸಾಗರದ 7 ಕಿಲೋಮೀಟರ್ ಆಳದಲ್ಲಿ ಸೆಫಲೋಪಾಡ್ ಅನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)