

ಬೀಜಿಂಗ್: ಜಗತ್ತಿನಲ್ಲೇ ಅಪರೂಪದ ಸಂಪೂರ್ಣ ಬಿಳಿ ಪಾಂಡಾ ಕ್ಯಾಮರಾದಲ್ಲಿ ಇತ್ತೀಚಿಗೆ ಸೆರೆಯಾಗಿದೆ. ಚೀನಾದ ವೋಲಾಂಗ್ ಸಂರಕ್ಷಿತ ಅರಣ್ಯದಲ್ಲಿ ಕಂಡುಬಂದಿರುವ ಈ ವಿಶಿಷ್ಟ ಪಾಂಡಾವು ಪ್ರಸ್ತುತ ಜಗತ್ತಿನಲ್ಲಿ ಜೀವಂತವಾಗಿರುವ ಏಕೈಕ ಪಾಂಡಾ ಎನ್ನಲಾಗಿದೆ.
ಈ ಪಾಂಡಾಗೆ ಸುಮಾರು 5-6 ವರ್ಷಗಳು ಎಂದು ಅಂದಾಜಿಲಾಗಿದ್ದು, ಇದು ಮೊದಲ ಬಾರಿಗೆ 2019ರಲ್ಲಿ ಕಂಡು ಬಂದಿತ್ತು. ಆಗ ವೋಲಾಂಗ್ ಸಂರಕ್ಷಿತ ಅರಣ್ಯವು ಈ ಪಾಂಡಾದ ಚಿತ್ರವನ್ನು ಹಂಚಿಕೊಂಡಿತ್ತು. ತದನಂತರ ಕಣ್ಮರೆಯಾಗಿದ್ದ ಪಾಂಡಾ ಹಲವು ವರ್ಷಗಳ ಬಳಿಕ ಕ್ಯಾಮರಾ ಕಣ್ಣಿಗೆ ಬಿದ್ದಿದೆ.
ಸಾಮಾನ್ಯವಾಗಿ ಪಾಂಡಾಗಳು ಗಾಢವಾದ ಕಪ್ಪು ಮತ್ತು ಬಿಳಿ ಬಣ್ಣದಾಗಿದ್ದರೆ, ಈ ಅಪರೂಪದ ಪಾಂಡಾ ಸಂಪೂರ್ಣ ಬಿಳಿ ಬಣ್ಣದಲ್ಲಿದ್ದು ಇದರ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.(ಏಜೆನ್ಸೀಸ್)