

ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ನವೆಂಬರ್ 30 ರಂದು ಮತಾದನ ನಡೆಯಲಿದೆ. ಈ ಸಂದರ್ಭದಲ್ಲಿ ಮತಗಟ್ಟೆಗಳಿಗೆ ತೆರಳಲು ಮತದಾರರಿಗೆ ಉಚಿತವಾಗಿ ಬೈಕ್ ಸವಾರಿ ಸೌಲಭ್ಯ ಒದಗಿಸಲಾಗುತ್ತಿದೆ!
ಚುನಾವಣೆಗೆ ನಿಂತಿರುವ ಯಾವುದೇ ಅಭ್ಯರ್ಥಿ ಇಲ್ಲವೇ ಯಾವುದೇ ಪಕ್ಷ ಇಂತಹ ಸೌಲಭ್ಯ ಒದಗಿಸುತ್ತಿಲ್ಲ.
ರೈಡ್ ಶೇರಿಂಗ್ ಪ್ಲಾಟ್‌ಫಾರ್ಮ್ ಕಂಪನಿ ರ್ಯಾಪಿಡೊ ಇಂತಹ ಸೌಲಭ್ಯ ಒದಗಿಸುವುದಾಗಿ ಸೋಮವಾರ ಘೋಷಿಸಿದೆ. ಆದರೆ, ರಾಜಧಾನಿ ಹೈದರಾಬಾದ್ ನಗರದಲ್ಲಿ ಮಾತ್ರ ಸೌಲಭ್ಯ ಒದಗಿಸಲಾಗುತ್ತಿದೆ. ಈ ನಗರದ 2600 ಮತಗಟ್ಟೆಗಳಿಗೆ ಈ ಉಚಿತ ಸೌಲಭ್ಯ ಕಲ್ಪಿಸಲು ಮುಂದಾಗಿದೆ
ತೆಲಂಗಾಣದಲ್ಲಿ ಮತದಾನ ಪ್ರಮಾಣವನ್ನು, ವಿಶೇಷವಾಗಿ ಯುವಕರಲ್ಲಿ ಹೆಚ್ಚಿಸಲು ರ್ಯಾಪಿಡೊ ಕಂಪನಿಯ ಬದ್ಧತೆಯನ್ನು ಈ ಕ್ರಮ ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.