More

    ಸನಾತನ ಧರ್ಮ ಉದಯನಿಧಿಯಿಂದ ನಿರ್ಮೂಲನೆಯಾಗುತ್ತದೆ ಎನ್ನುವುದು ತಮಾಷೆ; ಜಾರ್ಖಂಡ್​ ರಾಜ್ಯಪಾಲರ ವಾಗ್ದಾಳಿ

    ಸೇಲಂ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್​ ಅವರು ಸನಾತನ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಉದ್ಭವಿಸಿದ ವಿವಾದ, ವಾಗ್ದಾಳಿ, ಆರೋಪ-ಪ್ರತ್ಯಾರೋಪಗಳು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಜಾರ್ಖಂಡ್ ರಾಜ್ಯಪಾಲರಾದ ಸಿಪಿ ರಾಧಾಕೃಷ್ಣನ್ ಅವರ ಸರದಿಯಾಗಿದೆ.

    ತಮಿಳುನಾಡಿನ ಸೇಲಂನಲ್ಲಿ ಪೆರಿಯ ಮಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ರಾಧಾಕೃಷ್ಣನ್, ಸನಾತನ ಧರ್ಮ ನಾಶ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ, ಯಾರೂ ಯಶಸ್ವಿಯಾಗಲಿಲ್ಲ ಎಂದು ಹೇಳಿದ್ದಾರೆ.

    “ಅನೇಕ ಮೊಘಲ್ ರಾಜರು ಸನಾತನ ಧರ್ಮ ನಾಶ ಮಾಡಲು ಪ್ರಯತ್ನಿಸಿದರು. ಅಲ್ಲದೆ, ಹಿಂದೂಗಳನ್ನು ಕೊಂದರು. ಇತಹ ಪ್ರಯತ್ನಗಳ ನಂತರವೂ ಉಳಿದುಕೊಂಡಿರುವ ಸನಾತನವು ಅವನಿಂದ (ಉದಯನಿಧಿ) ನಿರ್ಮೂಲನೆಯಾಗುತ್ತದೆ ಎಂದು ಭಾವಿಸುವುದು ನನಗೆ ತಮಾಷೆಯಾಗಿದೆ” ಎಂದು ಅವರು ಹೇಳಿದರು.

    ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ಮಾತ್ರ ಏನೂ ಬೇಕಾದರೂ ಹೇಳುವ ಅಥವಾ ಮಾಡುವ ಅಧಿಕಾರ ದೊರೆಯುವುದಿಲ್ಲ ಎಂದು ಜರಿದರು. “ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ, ಏನನ್ನಾದರೂ ಹೇಳಲು ಅಥವಾ ಮಾಡಲು ಸಂವಿಧಾನವು ಅವಕಾಶ ನೀಡುವುದಿಲ್ಲ” ಎಂದರು.

    ಮಸೂದೆ ತಡೆಹಿಡಿಯುವ ರಾಜ್ಯಪಾಲರ ಕರ್ತವ್ಯ:

    ಸಂವಿಧಾನವನ್ನು ರಕ್ಷಿಸುವ ಮತ್ತು ಅದಕ್ಕೆ ವಿರುದ್ಧವಾದ ಮಸೂದೆಗಳನ್ನು ತಡೆಹಿಡಿಯುವುದು ರಾಜ್ಯಪಾಲರ ಕರ್ತವ್ಯ ಎಂದು ಜಾರ್ಖಂಡ್ ರಾಜ್ಯಪಾಲರು ಪ್ರತಿಪಾದಿಸಿದರು.

    ರಾಜ್ಯಪಾಲರ ಪಾತ್ರದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ ರಾಧಾಕೃಷ್ಣನ್, ‘ಸಂವಿಧಾನಕ್ಕೆ ವ್ಯತಿರಿಕ್ತವಾಗಿರುವ ಯಾವುದೇ ಮಸೂದೆ ತಡೆಹಿಡಿಯುವುದು ರಾಜ್ಯಪಾಲರ ಕರ್ತವ್ಯ’ ಎಂದು ಹೇಳಿದರು.

    73ರ ವೃದ್ಧಾಪ್ಯದಲ್ಲೂ ಮೂತ್ರಪಿಂಡ ಕಸಿ ಯಶಸ್ವಿ; 63ರ ವಯೋವೃದ್ಧೆ ಪತ್ನಿಯೇ ದಾನಿ!

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನುಮತಿ ನೀಡಿದ ದೆಹಲಿ ಕೋರ್ಟ್; ದುಬೈಗೆ ಹಾರಲು ಡಿಕೆಶಿ ಸಜ್ಜು

    ಸಿಲ್ಕ್​ಯಾರಾ ಸುರಂಗ ನಿರ್ಮಾಣದಲ್ಲಿ ಭಾಗಿಯಾಗಿಲ್ಲ; ಹೆಸರು ಕೆಡಿಸುವ ಯತ್ನ ಖಂಡಿಸಿದ ಅದಾನಿ ಸಮೂಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts