More

    ಮೋದಿ ಜನಪರ ಯೋಜನೆಗಳಿಂದ ಅನುಕೂಲ

    ಮಾಗಡಿ: ಬೆಂಗಳೂರು ಗ್ರಾಮಾಂತರ ಲೋಕಸಭಾ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಮತದಾನ ಮುಗಿದ ನಂತರ ಹುಲಿಯೂರುದುರ್ಗ ಮಾರ್ಗವಾಗಿ ಮಾಗಡಿಗೆ ಆಗಮಿಸಿ ಬಿಜೆಪಿ -ಜೆಡಿಎಸ್ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.


    ಪಟ್ಟಣದ ಕಲ್ಯಾಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆಗೆ ಹಾಗೂ ಮೈತ್ರಿ ಮುಖಂಡರು, ಕಾರ್ಯಕರ್ತರ ಸಹಕಾರದಿಂದ ಶಾಂತಿಯುತವಾಗಿ ಮತದಾನ ನಡೆದಿದೆ. ನನಗೆ ಎಲ್ಲರೂ ಬೆಂಬಲಿಸಿ ಆಶೀರ್ವಾದ ನೀಡಿದ್ದಾರೆ ಎಂಬ ವಿಶ್ವಾಸವಿದೆ. ಇವರ ಶ್ರಮಕ್ಕೆ ನಾನು ಸದಾ ಚಿರ ಋಣಿಯಾಗಿದ್ದೇನೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಜನಪರ ಯೋಜನೆಗಳಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ. ಈ ಬಾರಿಯ ಚುನಾವಣೆ ದೇಶದ ಭವಿಷ್ಯದ ದೃಷ್ಟಿಯ ಚುನಾವಣೆಯಾಗಿದೆ. ನಮ್ಮ ದೇಶ ಇಂದು ವಿಶ್ವದ ಗುರುವಾಗಿದೆ. ಈ ಬಾರಿ ಎಲ್ಲ ವರ್ಗ, ಸಮುದಾಯದವರು ನನಗೆ ಸಹಕಾರ ನೀಡಿದ್ದಾರೆ ಎಂದರು.

    ಬಿಜೆಪಿ ಮುಖಂಡ ಎಂ.ಆರ್.ರಾಘವೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸರ್ವರಿಗೂ ಸಮಾನತೆ, ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಇತರ ದೇಶಗಳು ನಮ್ಮ ದೇಶದ ಕಡೆ ಗಮನಹರಿಸುತ್ತಿವೆ ಎಂದರೆ ಅದು ಸುಲಭದ ಮಾತಲ್ಲ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಬಿಜೆಪಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು.
    ಎಂಎಲ್ಸಿ ಆ.ದೇವೇಗೌಡ, ಬಿಜೆಪಿ ಟೌನ್ ಅಧ್ಯಕ್ಷ ನಾರಾಯಣಪ್ಪ, ಪುರಸಭಾ ಮಾಜಿ ಸದಸ್ಯ ರೂಪೇಶ್, ರಂಗಣ್ಣಿ, ಮುಖಂಡರಾದ ಎನ್‌ಇಎಸ್ ಬಿಎಲ್.ರುದ್ರೇಶ್, ಸೋಮಶೇಖರ್, ರಂಗನಾಥ್, ಪಟೇಲ್ ನಾರಾಯಣಪ್ಪ, ಪಂಚೆ ರಾಮಣ್ಣ, ರಾಜೇಶ್, ಶಂಕರ್, ಭಾಸ್ಕರ್, ಮಾರಯ್ಯ, ಆನಂದ್, ಕಿರಣ್, ಕಲ್ಯ ಚಿದಾನಂದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts