More

    ಸಿಲ್ಕ್​ಯಾರಾ ಸುರಂಗ ನಿರ್ಮಾಣದಲ್ಲಿ ಭಾಗಿಯಾಗಿಲ್ಲ; ಹೆಸರು ಕೆಡಿಸುವ ಯತ್ನ ಖಂಡಿಸಿದ ಅದಾನಿ ಸಮೂಹ

    ನವದೆಹಲಿ: ಉತ್ತರಾಖಂಡದ ಸಿಲ್ಕ್​ಯಾರಾ ಸುರಂಗ ಮಾರ್ಗದಲ್ಲಿ ಎರಡು ವಾರಗಳ ಹಿಂದೆ ಕುಸಿದ ಕಾರಣ ಸಿಲುಕಿಕೊಂಡಿರುವ 41 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯುವ ಕಾರ್ಯ ಯುದ್ಧೋಪಾದಿಯಲ್ಲಿ ಸಾಗಿದೆ. ನಿರ್ಮಾಣ ಹಂತದಲ್ಲಿ ಕುಸಿದಿರುವ ಈ ಸುರಂಗವನ್ನು ನಿರ್ಮಾಣ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ದೇಶದ ಪ್ರಮುಖ ಉದ್ಯಮವಾದ ಅದಾನಿ ಸಮೂಹವೇನಾದರೂ ಈ ಕಾಮಗಾರಿ ನಡೆಸುತ್ತಿದೆಯೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.
    ಈ ಹಿನ್ನೆಲೆಯಲ್ಲಿ ಸೋಮವಾರ ಅದಾನಿ ಸಮೂಹ ಈ ಕುರಿತು ಸ್ಪಷ್ಟನೆ ನೀಡಿದೆ.

    ಈ ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಮ್ಮ ಉದ್ಯಮ ಭಾಗಿಯಾಗಿಲ್ಲ ಎಂದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಸಮೂಹ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

    ಸುರಂಗ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಕಂಪನಿಯಲ್ಲಿ ಯಾವುದೇ ಪಾಲನ್ನು ಕೂಡ ಹೊಂದಿಲ್ಲ ಎಂದು ಅದಾನಿ ಸಮೂಹದ ವಕ್ತಾರರು ತಿಳಿಸಿದ್ದಾರೆ.

    “ಅದಾನಿ ಸಮೂಹ ಅಥವಾ ಅದರ ಯಾವುದೇ ಅಂಗಸಂಸ್ಥೆಗಳು ಸುರಂಗದ ನಿರ್ಮಾಣದಲ್ಲಿ ಯಾವುದೇ ರೀತಿಯಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿಲ್ಲ. ಸುರಂಗದ ನಿರ್ಮಾಣದಲ್ಲಿ ತೊಡಗಿರುವ ಕಂಪನಿಯಲ್ಲಿ ನಾವು ಯಾವುದೇ ಷೇರುಗಳನ್ನು ಹೊಂದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ” ಎಂದು ಅದಾನಿ ಸಮೂಹದ ವಕ್ತಾರರು ಹೇಳಿದ್ದಾರೆ.

    ತನ್ನ ಹೆಸರನ್ನು ಕುಸಿತಕ್ಕೆ ಜೋಡಿಸುವ “ನೀಚ ಪ್ರಯತ್ನಗಳನ್ನು” ಬಲವಾಗಿ ಖಂಡಿಸಿರುವ ಅದಾನಿ ಸಮೂಹವು, “ಈ ಸಮಯದಲ್ಲಿ, ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಿಕ್ಕಿಬಿದ್ದ ಕಾರ್ಮಿಕರು ಮತ್ತು ಅವರ ಕುಟುಂಬಗಳೊಂದಿಗೆ ಇವೆ” ಎಂದು ಹೇಳಿದೆ.

    ಚಾರ್ ಧಾಮ್ ಸರ್ವಋತು ಪ್ರವೇಶ ಯೋಜನೆಯ ಭಾಗವಾಗಿರುವ ಸಿಲ್ಕ್​ಯಾರಾ ಸುರಂಗವನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ನಿರ್ಮಿಸುತ್ತಿದೆ.

    ವಿದ್ಯಾರ್ಥಿ ಮೇಲೆ 108 ಬಾರಿ ಹಲ್ಲೆ ನಡೆಸಿದ ಸಹಪಾಠಿಗಳು;ಹಿಂಸಾತ್ಮಕ ವಿಡಿಯೋ ಗೇಮ್ಸ್​ ಪ್ರಭಾವ ಕುರಿತು ತನಿಖೆ

    ವಂದೇ ಭಾರತ ರೈಲಿನ ಮೇಲೆ ಕಲ್ಲು ತೂರಾಟ; ಪದೆಪದೇ ಮರುಕಳಿಸುತ್ತಿರುವುದೇಕೆ?

    ಛತ್ತೀಸಗಢದಲ್ಲಿ ಮತ್ತೆ ನಕ್ಸಲೀಯರ ಹಾವಳಿ; 14 ವಾಹನ, ಯಂತ್ರಗಳಿಗೆ ಬೆಂಕಿ

    d

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts