More

    ಛತ್ತೀಸಗಢದಲ್ಲಿ ಮತ್ತೆ ನಕ್ಸಲೀಯರ ಹಾವಳಿ; 14 ವಾಹನ, ಯಂತ್ರಗಳಿಗೆ ಬೆಂಕಿ

    ದಾಂತೇವಾಡ: ದೇಶದಲ್ಲಿ ನಕ್ಸಲೀಯರ ಹಾವಳಿ, ಹಿಂಸಾಚಾರ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿದೆ. ಹಾಗಂತ, ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಮಧ್ಯಪ್ರದೇಶ, ಛತ್ತೀಸಗಢ, ಮಹಾರಾಷ್ಟ್ರ, ಆಂಧ್ರಪ್ರದೇಶ ಮುಂತಾದ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಇವರ ಚಟುವಟಿಕೆಗಳು ಮುಂದುವರಿದಿವೆ. ನಕ್ಸಲೀಯರು ಸೋಮವಾರ ಮತ್ತೊಂದು ಹಿಂಸಾಚಾರ ಎಸಗಿದ್ದಾರೆ. ಈ ಬಾರಿ ಅವರು ಗುರಿಯಾಸಿಕೊಂಡಿರುವುದು ನಿರ್ಮಾಣ ಕಾರ್ಯಗಳಲ್ಲಿ ತೊಡಗಿದ್ದ ವಾಹನ ಮತ್ತು ಯಂತ್ರಗಳನ್ನು.

    ಛತ್ತೀಸ್‌ಗಢ ರಾಜ್ಯದ ದಾಂತೇವಾಡ ಜಿಲ್ಲೆಯಲ್ಲಿ ಸೋಮವಾರ ನಕ್ಸಲೀಯರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 14 ವಾಹನಗಳು ಮತ್ತು ಯಂತ್ರಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಗಾಲಿ ಕ್ಯಾಂಪ್‌ನಲ್ಲಿ ನಸುಕಿನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ.

    40 ರಿಂದ 50 ಅಪರಿಚಿತ ಜನರು, ನಾಗರಿಕರಂತೆ ಕಾಣುತ್ತಿದ್ದರು. ಇದರಲ್ಲಿ ಕೆಲವರು ಶಸ್ತ್ರಸಜ್ಜಿತರಾಗಿದ್ದರು. ಘಟನಾ ಸ್ಥಳದಲ್ಲಿ ನಿಲ್ಲಿಸಿದ್ದ ಟ್ರಕ್‌ಗಳು, ಮಣ್ಣು ಸಾಗಿಸುವ ಯಂತ್ರಗಳು ಸೇರಿ 14 ವಾಹನ ಮತ್ತು ಯಂತ್ರಗಳನ್ನು ಸುಟ್ಟು ಹಾಕಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಖಾಸಗಿ ನಿರ್ಮಾಣ ಸಂಸ್ಥೆಗೆ ಸೇರಿದ ಈ 13 ವಾಹನ ಮತ್ತು ಯಂತ್ರಗಳನ್ನು ದಾಂತೇವಾಡ ಮತ್ತು ಬಾಚೇಲಿ ನಡುವೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಬಳಸಲಾಗುತ್ತಿತ್ತು. ಒಂದು ನೀರಿನ ಟ್ಯಾಂಕರ್ ಅನ್ನು ರೈಲ್ವೆ ಕಾಮಗಾರಿಗೆ ಉಪಯೋಗಿಸಲಾಗುತ್ತಿತ್ತು.

    ಮೇಲ್ನೋಟಕ್ಕೆ ಇದರಲ್ಲಿ ನಕ್ಸಲೀಯರ ಕೈವಾಡ ಇರುವುದು ಗೊತ್ತಾಗುತ್ತದೆ. ಆರೋಪಿಗಳ ಪತ್ತೆಗಾಗಿ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಂತೇವಾಡದ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವುದು ಮತ್ತು ರಸ್ತೆ ಕಾಮಗಾರಿಗಳಿಗೆ ಬಳಸುವ ವಾಹನ, ಯಂತ್ರಗಳಿಗೆ ಹಾನಿ ಮಾಡುವ ಕೃತ್ಯವನ್ನು ನಕ್ಸಲೀಯರು ಆಗಾಗ್ಗೆ ಮಾಡಿಕೊಂಡೇ ಬಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts