

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಿಸುವಂತೆ ನಾಲ್ಕು ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಒಟ್ಟಾರೆ ಶೇ.15 ರಿಂದ ಶೇ.20 ರಷ್ಟು ಪ್ರಯಾಣ ದರ ಹೆಚ್ಚಿಸಬೇಕೆಂಬುದು ನಿಗಮಗಳ ಕೋರಿಕೆ ಆಗಿದೆ. ಸಿಎಂ ಹಾಗೂ ಸಾರಿಗೆ ಸಚಿವರು ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ.
2010ರಲ್ಲಿ ಬಿಎಂಟಿಸಿ ಪ್ರಯಾಣ ದರ ಏರಿಕೆ ಆಗಿತ್ತು. ಇನ್ನುಳಿದ ಮೂರು ನಿಗಮಗಳಲ್ಲಿ ದರ ಹೆಚ್ಚಳವಾಗಿ ಐದು ವರ್ಷ ಕಳೆದಿದೆ. ಡೀಸೆಲ್ ದರ ಏರಿಕೆ ಜತೆಗೆ ಬಿಡಿ ಭಾಗಗಳು, ನೌಕರರ ವೇತನ ಕೂಡ ಹೆಚ್ಚಳವಾಗಿದೆ. ಇದರಿಂದ ನಿಗಮಗಳು ನಷ್ಟಕ್ಕೆ ಒಳಗಾಗಿರುವುದರಿಂದ ದರ ಹೆಚ್ಚಳಕ್ಕೆ ಪ್ರಸ್ತಾಪವನೆ ಇಟ್ಟಿವೆ. ಸಿಎಂ ಒಪ್ಪಿದರಷ್ಟೇ ದರ ಹೆಚ್ಚಳ ಜಾರಿಗೆ ಬರಲಿದೆ. 4 ನಿಗಮಗಳ ಕೋರಿಕೆಯನ್ನು ಸರ್ಕಾರ ನಿರ್ಧರಿಸಬೇಕಿದೆ. ಯಾವಾಗ ನಿರ್ಧಾರವಾಗಲಿದೆ ಎಂಬುದನ್ನು ಹೇಳಲಾಗದೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.