ಮದುವೆ ಆಗುವುದಾಗಿ ಅಪ್ರಾಪ್ತೆ ಮೇಲೆ ದೌರ್ಜನ್ಯ; ಯುವಕನಿಗೆ 3 ವರ್ಷ ಜೈಲು

Jail Punishment
Published on

ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ 1ನೇ ನ್ಯಾಯಾಲಯ ತೀರ್ಪು ನೀಡಿದೆ.

ಟಿ. ದಾಸರಹಳ್ಳಿ 6ನೇ ಕ್ರಾಸ್ ಕಾಳಸೀನಗರ ನಿವಾಸಿ ವಿಷ್ಣು (24) ಶಿಕ್ಷೆಗೆ ಗುರಿಯಾದವ. 3 ವರ್ಷ ಜೈಲು, 30 ಸಾವಿರ ರೂ. ದಂಡ ಮತ್ತು ಸಂತ್ರಸ್ತೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶೆ ಕೆ.ಎನ್. ರೂಪಾ ಶಿಕ್ಷೆ ವಿಧಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದ ಮಂಡಿಸಿದ್ದರು.

17 ವರ್ಷದ ಸಂತ್ರಸ್ತೆ ಕಾಲೇಜಿಗೆ ಹೋಗುವಾಗ ಹಿಂಬಾಲಿಸಿ ವಿಷ್ಣು, ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. 2019ರ ಮೇ 21ರ ಬೆಳಗ್ಗೆ 10 ಗಂಟೆಯಲ್ಲಿ ನೊಂದ ಬಾಲಕಿಗೆ ಮದುವೆ ಆಗುವುದಾಗಿ ನಂಬಿಸಿ ಆಟೋದಲ್ಲಿ ಬಲವಂತವಾಗಿ ಕರೆದೊಯ್ದು ಕಾಳಸೀನಗರದಲ್ಲಿ ಇರಿಸಿಕೊಂಡಿದ್ದ. ಸಂತ್ರಸ್ತೆ ಮಲಗಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದ.

ನೊಂದ ಬಾಲಕಿ, ಪಾಲಕರೆದುರು ಅಳಲು ತೋಡಿಕೊಂಡಿದ್ದಳು. ಬಾಲಕಿ ಪಾಲಕರು ಕೊಟ್ಟ ದೂರಿನ ಮೇರೆಗೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ವಿಷ್ಣುನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net