ಬಾಲಕಿ ಮೇಲೆ ಅತ್ಯಾಚಾರ;ಅಪರಾಧಿಗೆ 5 ವರ್ಷ ಜೈಲು

COURT
Published on

ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ 1ನೇ ಎ್ಟಿಎಸ್‌ಸಿ ಕೋರ್ಟ್ ತೀರ್ಪು ನೀಡಿದೆ. ನಾಯಂಡಹಳ್ಳಿ ಸಮೀಪದ ವಿನಾಯಕ ಲೇಔಟ್ ನಿವಾಸಿ ಲಕ್ಷ್ಮೀನಾರಾಯಣ ಅಲಿಯಾಸ್ ಲಕ್ಷ್ಮೀನರಸಯ್ಯ (55) ಅಪರಾಧಿ. 5 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿ 1ನೇ ಎ್ಟಿಎಸ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಕೆ.ಎನ್. ರೂಪಾ, ತೀರ್ಪು ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ, ಸಂತ್ರಸ್ತೆ ಪರವಾಗಿ ವಾದ ಮಂಡಿಸಿದ್ದರು.

ಸಂತ್ರಸ್ತೆಯ ದೂರದ ಸಂಬಂಧಿಯಾಗಿರುವ ಲಕ್ಷ್ಮೀನಾರಾಯಣ್, ಸೆಕ್ಯೂರಿಟಿ ಗಾರ್ಡ್ ಆಗಿದ್ದ. 2022ರ ಮಾರ್ಚ್ 7ರ ರಾತ್ರಿ 9 ಗಂಟೆಯಲ್ಲಿ ತಾಯಿ, ತನ್ನ ಮಗಳನ್ನು ಮಲಗಿಸಿ ಹೊರಗೆ ಹೋಗಿದ್ದರು. ಮನೆಗೆ ಬಂದ ಅಪರಾಧಿ, ಮಲಗಿದ್ದ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಮನೆಗೆ ವಾಪಸ್ ಬಂದ ಬಾಲಕಿ ತಾಯಿ, ಮಗಳನ್ನು ರಕ್ಷಣೆ ಮಾಡಿದ್ದರು.

ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡು ಲಕ್ಷ್ಮೀನಾರಾಯಣ್‌ನನ್ನು ಬಂಧಿಸಿದ್ದರು. ತನಿಖಾಧಿಕಾರಿ ಮನೋಜ್ ಹೂವಾಳ್ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net