ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು

court
Published on

ಬೆಂಗಳೂರು: ಚಾಕೋಲೇಟ್, ಮೊಬೈಲ್‌ನಲ್ಲಿ ಗೇಮ್ ಆಡಲು ಕೊಟ್ಟು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿ ಎ್ಟಿಎಸ್‌ಸಿ-3ನೇ ನ್ಯಾಯಾಲಯ ತೀರ್ಪು ನೀಡಿದೆ.

ಜೀವನ್‌ಭೀಮಾನಗರದ ಬಾಬಾ ಸಾಹೇಬ್ ಕಾಲನಿ ನಿವಾಸಿ ವೆಂಕಟೇಶ್ ಅಪರಾಧಿ. ವೆಂಕಟೇಶ್‌ಗೆ, ನಾಲ್ಕೈದು ವರ್ಷಗಳಿಂದ ಬಾಲಕಿಯ ಪಾಲಕರು ಪರಿಚಯವಿದ್ದರು. ಇದೇ ಸಲುಗೆಯಲ್ಲಿ ಬಾಲಕಿಗೆ ಚಾಕೋಲೇಟ್, ಮೊಬೈಲ್ ಕೊಟ್ಟು ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. 2022ರಲ್ಲಿ ಪಾಲಕರು ಕೆಲಸ ನಿಮಿಕ್ತ ಹೊರಗೆ ಹೋದಾಗ ಬಾಲಕಿಗೆ ಚಾಕೋಲೇಟ್ ಕೊಡುವುದಾಗಿ ಆಮಿಷವೊಡ್ಡಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯ ಬಹಿರಂಗ ಮಾಡಿದರೆ ತಂದೆ, ತಾಯಿಯನ್ನು ಕೊಲೆ ಮಾಡುವುದಾಗಿ ಸಂತ್ರಸ್ತೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದ.

ಈ ವಿಷಯ ತಿಳಿದ ಸಂತ್ರಸ್ತೆಯ ಪಾಲಕರು ಜೀವನ್‌ಭೀಮಾನಗರ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಅಂದಿನ ಇನ್‌ಸ್ಪೆಕ್ಟರ್ ಬಿ. ರಾಜಣ್ಣ ನೇತೃತ್ವದ ತಂಡ ವೆಂಕಟೇಶ್‌ನನ್ನು ಬಂಧಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು. ಎ್ಟಿಎಸ್‌ಸಿ-3ನೇ ನ್ಯಾಯಾಲಯದ ನ್ಯಾ. ಇಷ್ರತ್ ಜಹಾನ್ ಅರ, ವಾದ-ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದ್ದಾರೆ. ನೊಂದ ಬಾಲಕಿಗೆ 3 ಲಕ್ಷ ರೂ. ಪರಿಹಾರ ಮತ್ತು 25 ಸಾವಿರ ರೂ. ದಂಡದ ಮೊತ್ತವನ್ನು ಸಹ ನೀಡುವಂತೆ ತೀರ್ಪಿನಲ್ಲಿ ನ್ಯಾಯಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net