ಚಿತ್ರ ನಿರ್ಮಾಪಕನ​ ವಿರುದ್ಧ ರೇಪ್ ಕೇಸ್; ಕೆಲಸ ನೀಡುವುದಾಗಿ ಹೇಳಿ ವಂಚಿಸಿದ ಆರೋಪ

bhushan
Published on

ಮುಂಬೈ : ಟಿ-ಸೀರಿಸ್ ಮ್ಯೂಸಿಕ್ ರೆಕಾರ್ಡಿಂಗ್ ಕಂಪೆನಿ ಎಂಡಿ ಹಾಗೂ ಬಾಲಿವುಡ್ ಚಿತ್ರ ನಿರ್ಮಾಪಕರಾಗಿರುವ ಭೂಷಣ್ ಕುಮಾರ್​ ಅವರ ಮೇಲೆ ರೇಪ್​ ಕೇಸ್ ದಾಖಲಾಗಿದೆ. 30 ವರ್ಷ ವಯಸ್ಸಿನ ಮಹಿಳೆಯೊಬ್ಬರು ನೀಡಿರುವ ದೂರಿನ ಮೇಲೆ ಮುಂಬೈನ ಠಾಣೆಯೊಂದರಲ್ಲಿ ಎಫ್​.ಐ.ಆರ್. ದಾಖಲಾಗಿದೆ.

ತಮ್ಮ ಕಂಪೆನಿಯ ಪ್ರಾಜೆಕ್ಟ್​​ಗಳಲ್ಲಿ ಕೆಲಸ ನೀಡುವ ಭರವಸೆ ನೀಡಿ, ಭೂಷಣ್​ ಕುಮಾರ್, ಲೈಂಗಿಕ ಅತ್ಯಾಚಾರ ನಡೆಸಿ, ವಂಚಿಸಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಅಂಧೇರಿಯ ಡಿ.ಎನ್​.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 376, 420 ಮತ್ತು 506 ರಡಿ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net