

ಬೆಂಗಳೂರು: ( Ranya Rao ) ದುಬೈನಿಂದ ಭಾರತಕ್ಕೆ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಅವರ ಬಂಧನವಾಗಿದೆ. ಈಕೆ ಕುರಿತಾಗಿ ಇಂಟ್ರಸ್ಟಿಂಗ್ ಮಾಹಿತಿಯೊಂದು ಹೊರ ಬಿದ್ದಿವೆ.
ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಡಿಆರ್‌ಐ ಅಧಿಕಾರಿಗಳು, ಮಾರ್ಚ್ 3 ರಂದು ಎಮಿರೇಟ್ಸ್ (ವಿಮಾನಯಾನ ಸಂಸ್ಥೆ) ವಿಮಾನದ ಮೂಲಕ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ 33 ವರ್ಷದ ಭಾರತೀಯ ಮಹಿಳಾ ಪ್ರಯಾಣಿಕರನ್ನು ತಡೆದರು. ತನಿಖೆ ನಡೆಸಿದಾಗ, 14.2 ಕೆಜಿ ತೂಕದ ಚಿನ್ನದ ಗಟ್ಟಿಗಳು ಪತ್ತೆಯಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದ್ದು, ಸುಮಾರು 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದರು. ಈ ಚಿನ್ನವನ್ನು ದುಬೈನಿಂದ ತರಲಾಗಿತ್ತು ಎನ್ನಲಾಗಿದೆ. 14.2 ಕೆಜಿ ಚಿನ್ನದ ಈ ಸರಕು ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಚಿನ್ನವಾಗಿದೆ.
ನಟಿ ರನ್ಯಾ ಬಂಧನದ ನಂತರ ಡಿಆರ್‌ಐ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಈಕೆ ನಿವಾಸದ ಮೇಲೆ ದಾಳಿ ನಡೆಸಿದರು, ಅಲ್ಲಿ ಅವರು ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದಾರೆ. ಶೋಧದ ವೇಳೆ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಕೆಲವು ವರದಿಗಳ ಪ್ರಕಾರ ರನ್ಯಾ 15 ದಿನಗಳಲ್ಲಿ 4 ಬಾರಿ ದುಬೈಗೆ ಭೇಟಿ ನೀಡಿದ್ದರು, ಅವಳು ದುಬೈಗೆ ಭೇಟಿ ನೀಡಿದಾಗಲೆಲ್ಲಾ, ಕಸ್ಟಮ್ಸ್ ತಪಾಸಣೆಯಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸಲು ಪ್ರತಿ ಬಾರಿಯೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಿದ್ದಳು. ರನ್ಯಾ ತಮ್ಮ ಪ್ರಯಾಣದ ಸಮಯದಲ್ಲಿ ಪ್ರತಿ ಬಾರಿಯೂ ಜಾಕೆಟ್ ಮತ್ತು ಬೆಲ್ಟ್ ಅನ್ನು ಬಳಸುತ್ತಿದ್ದಳು ಎನ್ನಲಾಗಿದೆ.
ಕಳೆದ ವರ್ಷದಲ್ಲಿ ರನ್ಯಾ ಒಟ್ಟು 30 ಬಾರಿ ದುಬೈಗೆ ಭೇಟಿ ನೀಡಿದ್ದಾರೆ. ಅವಳು ಪ್ರತಿ ಪ್ರವಾಸದಲ್ಲೂ ಹಲವಾರು ಕಿಲೋಗಳಷ್ಟು ಚಿನ್ನವನ್ನು ತಂದಿದ್ದಳು. ಕಳ್ಳಸಾಗಣೆ ಮಾಡಿದ ಚಿನ್ನಕ್ಕೆ ರಾವ್‌ಗೆ ಪ್ರತಿ ಕಿಲೋಗ್ರಾಂಗೆ 1 ಲಕ್ಷ ರೂ. ಪ್ರತಿ ಪ್ರವಾಸದಲ್ಲೂ ಅವರು ಸುಮಾರು 12-13 ಲಕ್ಷ ರೂ. ಗಳಿಸಿದ್ದಾರೆಂದು ವರದಿಯಾಗಿದೆ. ರಾವ್ ತಮ್ಮ ಪ್ರಯಾಣದ ಸಮಯದಲ್ಲಿ ಪ್ರತಿ ಬಾರಿಯೂ ಜಾಕೆಟ್ ಮತ್ತು ಬೆಲ್ಟ್ ಅನ್ನು ಬಳಸುತ್ತಿದ್ದರು.
ಒಬ್ಬಂಟಿಯಾಗಿ ಕೆಲಸ ಮಾಡುತ್ತಿದ್ದಳೇ ಅಥವಾ ದುಬೈ ಮತ್ತು ಭಾರತ ನಡುವೆ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಕಳ್ಳಸಾಗಣೆ ಜಾಲದ ಭಾಗವಾಗಿದ್ದಳೇ ಎಂಬುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.