ಮದುವೆ ಹೊಸ್ತಿಲಲ್ಲೇ ಮುರಿದು ಬಿತ್ತು ನಟಿ ತಮನ್ನಾ, ವಿಜಯ್‌ ವರ್ಮಾ ಸಂಬಂಧ! ಅಸಲಿಗೆ ಆಗಿದ್ದೇನು? Tamannaah and Vijay Varmas breakup

Rumored reason behind Tamannaah and Vijay Varmas breakup
Published on

ಮುಂಬೈ: ( Tamannaah and Vijay Varmas breakup )   ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ  ನಟ ವಿಜಯ್ ವರ್ಮಾ ಜೋಡಿ ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಲಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ  ಸುದ್ದಿ ಬೆನ್ನಲ್ಲೇ ಇದೀಗ ಈ ಜೋಡಿ ಬೇರೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿದೆ.

ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ 2022ರಲ್ಲಿ ಡೇಟಿಂಗ್ ಆರಂಭಿಸಿದರು. ಇವರು ‘ಲಸ್ಟ್ ಸ್ಟೋರೀಸ್ 2’ ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು.  ಇಬ್ಬರು ಜತೆಯಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದರು.  ಈ ಜೋಡಿ ಸದ್ಯದಲ್ಲೇ ಮದುವೆ ಆಗುತ್ತೆ ಎನ್ನುವ ಟಾಕ್​​ ಕೂಡಾ ಸಿನಿಮಾವಲಯದಲ್ಲಿತ್ತು.

ತಮನ್ನಾ ಭಾಟಿಯಾ ಅವರಿಗೆ ಈಗ 35 ವರ್ಷ. ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರೋ ಅವರು ತಮ್ಮದೇ ಆದ ಸಂಸಾರ ಕಟ್ಟಿಕೊಳ್ಳುವ ಆಸೆ ಹೊಂದಿದ್ದರು. ಹೀಗಾಗಿ, ಮದುವೆ ಆಗುವ ಬಗ್ಗೆ ಆಲೋಚನೆ ಮಾಡಿದರು. ಆದರೆ, ಇದಕ್ಕೆ ವಿಜಯ್ ವರ್ಮಾ ರೆಡಿ ಇರಲಿಲ್ಲ. ಈ ವಿಚಾರ ಇಬ್ಬರ ಮಧ್ಯೆ ಸಾಕಷ್ಟು ಕಿತ್ತಾಟಕ್ಕೆ ಕಾರಣ ಆಯಿತು ಎನ್ನಲಾಗಿದೆ.

ಮದುವೆಯ ಬಗ್ಗೆ ತಮನ್ನಾ ಅವರ ಆಸೆಯಿಂದಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬೇರ್ಪಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.

‘ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ವಾರದ ಹಿಂದೆ ಬೇರೆ ಆಗಿದ್ದಾರೆ. ಅವರು ಒಳ್ಳೆಯ ಗೆಳೆಯರಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಮುಂದಿನ ಜೀವನಕ್ಕಾಗಿ ಇವರು ಬೇರೆ ಆಗಲೇಬೇಕಿತ್ತು’ ಎಂದು ಮೂಲಗಳು ಹೇಳಿರೋದಾಗಿ ವರದಿ ಆಗಿದೆ. ಆದರೆ, ಈ ಬಗ್ಗೆ ಈ ಜೋಡಿ ಮಾಹಿತಿ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net