

ಮುಂಬೈ: ಬಾಲಿವುಡ್ನ ಸ್ಟಾರ್ ನಟ ರಣವೀರ್ ಸಿಂಗ್ ಸದ್ಯ ಟ್ರೆಂಡಿಂಗ್ ನಟರ ರೇಸ್ನಲ್ಲಿದ್ದು, ಇತ್ತೀಚೆಗಷ್ಟೇ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರೀ-ವೆಡ್ಡಿಂಗ್ನ ಅದ್ದೂರಿ ಸಮಾರಂಭಕ್ಕೆ ತಮ್ಮ ಪತ್ನಿ, ನಟಿ ದೀಪಿಕಾ ಪಡುಕೋಣೆ ಜತೆಗೆ ಆಗಮಿಸಿ, ಸಂಭ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಖ್ಯಾತ ನಿರ್ದೇಶಕನನ್ನು ಕಂಡು, ಇವರು ಸದ್ಯ ಚಿತ್ರರಂಗದಲ್ಲಿ ಭಾರೀ ಬ್ಯುಸಿಯಿದ್ದಾರೆ. ಇವರಿಗಾಗಿ ಬಿಟೌನ್ನ ನಟರು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಸಲಿಗೆ ಆ ನಿರ್ದೇಶಕ ಬೇರಾರು ಅಲ್ಲ, ಶಾರೂಖ್ ಅಭಿನಯದ 'ಜವಾನ್' ಚಿತ್ರವನ್ನು ನಿರ್ದೇಶಿಸಿದ ಅಟ್ಲೀ ಕುಮಾರ್. ಜವಾನ್ ಮೂಲಕ ಬಾಲಿವುಡ್ನಲ್ಲಿ ತಮ್ಮ ಪ್ರತಿಭೆಯನ್ನು ಮತ್ತಷ್ಟು ಪರಿಚಯಿಸಿದ ಅಟ್ಲೀ, ಈ ಚಿತ್ರದ ಬಳಿಕ ಹಲವಾರು ದೊಡ್ಡ ಆಫರ್ಗಳು ಸ್ವೀಕರಿಸಿದರು. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ ಜವಾನ್ ಚಿತ್ರಕ್ಕೆ ಪ್ರೇಕ್ಷಕರಿಂದಲೂ ಅಭೂತಪೂರ್ವ ಬೆಂಬಲ ದೊರಕಿತು.
ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಸಖತ್ ಬ್ಯುಸಿಯಾಗಿರುವ ನಿರ್ದೇಶಕ ತಮ್ಮ ಪತ್ನಿಯೊಂದಿಗೆ ಅನಂತ್ ಅಂಬಾನಿ ಅವರ ಪೂರ್ವ ವಿವಾಹ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಿರ್ದೇಶಕನನ್ನು ನೋಡಿ ಮಾತನಾಡಿದ ರಣವೀರ್, "ನಮ್ಮ ಎಲ್ಲಾ ಬಾಂಬೆ ಹೀರೋಗಳು ಅಟ್ಲಿಯನ್ನು ಹಿಡಿಯಲು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಇವರು ತುಂಬ ಬ್ಯುಸಿಯಾಗಿದ್ದು, ಬಾಲಿವುಡ್ನ ಆಳುತ್ತಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).