ಮಾನಸಿಕ ಖಿನ್ನತೆಗೆ ಒಳಗಾಗಿದ್ರಾ ದೀಪಿಕಾ? ರಹಸ್ಯ ಬಿಚ್ಚಿಟ್ಟ ಪತಿ ರಣ್​​ವೀರ್​​ ಸಿಂಗ್​​​..!

d finnn
Published on

ದೀಪಿಕಾ ಪಡುಕೋಣೆ ಬಾಲಿವುಡ್​​​ನಲ್ಲಿ ಹೆಸರಾಂತ ಕಲಾವಿದೆ. ಸದ್ಯ ಕಾಫಿ ವಿತ್​​ ಕರಣ್​ ಶೋನಲ್ಲಿ ಇತ್ತೀಚೆಗಷ್ಟೇ ದೀಪಿಕಾ ಭಾಗವಹುಇಸಿದ್ದು, ಅದರ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

2014ರಲ್ಲಿ ದೀಪಿಕಾ ಮಾನಸಿಕ ಖಿನ್ನತೆ ಎದುರಿಸಿದಂತಹ ದಿನಗಳ ಬಗ್ಗೆ ಆಗಾಗ ಕೆಲ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಲೇ ಇರುತ್ತಾರೆ. ಅಲ್ಲದೇ ಸಾಕಷ್ಟು ದೊಡ್ಡ ದೊಡ್ಡ ಹೀರೋಗಳ ಎದುರು ಅದ್ಭುತ ಪಾತ್ರಗಳನ್ನು ಮಾಡಿರುವ ನಟಿ ಗ್ಲಾಮರಸ್​​​ ಲುಕ್​​​ನಲ್ಲಿ ಹಾಟ್​​ ಆಗಿಯೇ ಕಾಣಿಸಿಕೊಳ್ಳುತ್ತಾರೆ.

ಬೋ್ಡ್​​​ನಟಿ ಡಿಪ್ರೆಶನ್​​​​​​ನಿಂದ ಹೊರಬಂದ ಮೇಲೆ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದರು.
ಈ ವಿಚಾರದಲ್ಲಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇತ್ತೀಚೆಗೆ, ದೀಪಿಕಾ ಪಡುಕೋಣೆ ಖಿನ್ನತೆಗೆ ಹೋಗಿರುವ ವಿಚಾರವಾಗಿ ರಣವೀರ್ ಪ್ರತಿಕ್ರಿಯಿಸಿದ್ದಾರೆ.

ಫಿ ವಿತ್ ಕರಣ್ ಶೋನಲ್ಲಿ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ರಣವೀರ್‌ "ದೀಪಿಕಾ ಅವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನನಗೆ ತುಂಬಾ ಸಮಯ ಹಿಡಿಯಿತು. ಅವರ ಆಲೋಚನೆಗಳು ಬೇರೆಲ್ಲೋ ಇದ್ದವು. ಅವಳು ಅನೇಕ ಬಾರಿ ಅಳುತ್ತಿದ್ದಳು, ವಿಚಾರವನ್ನು ಮನೆಯವರಿಗೆ ತಿಳಿಸಿದ್ದೆ"

ಅಷ್ಟೇ ಅಲ್ಲ… ಖಿನ್ನತೆ ಭಯಾನಕ. ಅರಿವು ಮತ್ತು ಸಮಾಲೋಚನೆ ಬಹಳ ಅವಶ್ಯಕ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಸಹ ರಣವೀರ್ ಸಿಂಗ್ ಹೇಳಿದ್ದಾರೆ.

ಸದ್ಯ ಕಾಫಿ ವಿತ್​​​ ಕರಣ್​ ಶೋ ವೀಕ್ಷಿಸಿದ ಸಾಕಷ್ಟು ಮಂದಿ ರಣ್​​ವೀರ್​​ ಸಿಂಗ್​​​ ರೀತಿ ಮಾನಸಿಕ ಖಿನ್ನತೆಯನ್ನ ಅರ್ಥ ಮಾಡಿಕೊಂಡು, ದೀಪಿಕಾಗೆ ಧೈರ್ಯ ತುಂಬಿದ ರಣ್​​ವೀರ್​​ನಂತಹ ಗಂಡ ನಮ್ಮ ಜೀವನದಲ್ಲಿಯೂ ಇರಬೇಕು ಎಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಪ್ರಅಯ ವ್ಯಕದ್ತ ಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net