ರಂಗೇರಿದ ವೇಮಗಲ್ ಸೊಸೈಟಿ ಚುನಾವಣೆ

vemgal sociţy
ವೇಮಗಲ್‌ ಸೊಸೈಟಿ ಕಟ್ಟಡ.
Published on

ವೇಮಗಲ್: ಕೋಲಾರ ತಾಲೂಕಿನ ವೇಮಗಲ್ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆ ಡಿ.28ಕ್ಕೆ ನಿಗದಿಯಾಗಿದ್ದು, ಚುನಾವಣಾ ಕಾವು ಜೋರಾಗಿದೆ.

ವಾರ್ಷಿಕ 18 ಕೋಟಿ ರೂ.ಗೂ ಮಿಗಿಲಾಗಿ ವಹಿವಾಟು ನಡೆಸುವ ಸೊಸೈಟಿ ಚುನಾವಣೆಗೆ ಇದೇ ಮೊದಲ ಬಾರಿಗೆ ಸಾಲಗಾರರ ಕ್ಷೇತ್ರದಿಂದ ೬೫ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 19 ಸೇರಿ ಒಟ್ಟು 84 ನಾಮಪತ್ರ ಸಲ್ಲಿಕೆಯಾಗಿವೆ. ಸಾಲಗಾರರ ಕ್ಷೇತ್ರದ 11 ಸ್ಥಾನಗಳಲ್ಲಿ ಸಾಮಾನ್ಯ 5 ಸ್ಥಾನಗಳಿಗೆ 34, ಪ.ಜಾತಿ 1 ಸ್ಥಾನಕ್ಕೆ 6, ಪ. ಪಂಗಡ 1 ಸ್ಥಾನಕ್ಕೆ 5, ಹಿಂದುಳಿದ ವರ್ಗಎ 1 ಸ್ಥಾನಕ್ಕೆ 7, ಪ್ರವರ್ಗ ಬಿ1 ಸ್ಥಾನಕ್ಕೆ 6, ಮಹಿಳಾ ಮೀಸಲು ೨ ಸ್ಥಾನಕ್ಕೆ ೭ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಸಾಮಾನ್ಯ 1 ಸ್ಥಾನಕ್ಕೆ 19 ನಾಮಪತ್ರ ಸಲ್ಲಿಕೆಯಾಗಿವೆ.

ಸಾಲಗಾರರ ಕ್ಷೇತ್ರದಲ್ಲಿ ೬೫೧ ಷೇರುದಾರರು, ಸಾಲಗಾರರಲ್ಲದ ಕ್ಷೇತ್ರದಲ್ಲಿ 652 ಷೇರುದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

*28ಕ್ಕೆ ಮತದಾನ

ನಾಮಪತ್ರ ಸಲ್ಲಿಕೆಗೆ ಡಿ.21 ಕಡೇ ದಿನವಾಗಿತ್ತು. ಡಿ.22 ರಂದು ಪರಿಶೀಲನೆ, 23ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ ಹಾಗೂ ಡಿ.28 ರಂದು ಮತದಾನ ಹಾಗೂ ಸಂಜೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಽಕಾರಿ ಎನ್.ವೆಂಕಟೇಶ್‌ಬಾಬು ತಿಳಿಸಿದ್ದಾರೆ.

1975ರಲ್ಲಿ ಸ್ಥಾಪಿತವಾದ ಸಂಘ

ವೇಮಗಲ್‌ನ ರೈತರ ಸೇವಾ ಸಹಕಾರ ಸಂಘ 1975ರಲ್ಲಿ ದಿ.ವಿ.ಎಸ್.ರಾಮಶೆಟ್ಟಿ ಹಾಗೂ ಹಲವರ ಪರಿಶ್ರಮದಿಂದ ಪ್ರಾರಂಭವಾಗಿದ್ದು, ಅಂದು ಅವಿರೋಧ ಆಯ್ಕೆ ನಡೆದಿತು. ಆ ನಂತರವೂ ವಿ.ಎಸ್ ರಾಮಶೆಟ್ಟಿ ಪುತ್ರ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾರ್ಗದರ್ಶನದಲ್ಲಿ 2020ರವರೆಗೂ ಅವಿರೋಧ ಪ್ರಕ್ರಿಯೆ ನಡೆದಿದೆಯಾದರೂ ೨೦೨೦ರ ಜನವರಿಯಲ್ಲಿ ಚುನಾವಣೆ ನಡೆಯಲೇಬೇಕಾದ ಅನಿವಾರ್ಯ ನಿರ್ಮಾಣವಾಗಿತ್ತು. ಆಗ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ಬಣ ಸೋಲು ಕಂಡಿತ್ತು. ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡರ ಬಣ ಜಯಗಳಿಸಿ ಶೆಟ್ಟಹಳ್ಳಿಯ ವಿ.ನಂಜುಂಡ (ನಾಗೇಶ್) ಅಧ್ಯಕ್ಷರಾಗಿದ್ದರು. ಪಕ್ಷಪಾತ ಮಾಡದೆ 5 ವರ್ಷ ಉತ್ತಮ ಆಡಳಿತ ನಡೆಸಿ ಸಂಸ್ಥೆಯನ್ನು ಲಾಭದ ಕಡೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿಯೂ ಅವಿರೋಧ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿ ಜೆಡಿಎಸ್‌ನವರೇ ಜಯಗಳಿಸುತ್ತಾರೆ ಎಂಬ ಮಾತುಗಳಿವೆ. ಅಂತೆಯೇ ಈ ಬಾರಿ ಜೆಡಿಎಸ್ ಪ್ರತ್ಯೇಕವಾಗಿ ಚುನಾವಣೆ ಎದುರಿಸಿದರೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ಮೇಲೆ ಅಸಮಾಧಾನಗೊಂಡು ಕಾಂಗ್ರೆಸ್ ಬೆಂಬಲ ಸೂಚಿಸಿದ್ದ ಕೆಲವು ಮುಖಂಡರು ಈ ಚುನಾವಣೆಯಲ್ಲಿ ನಾವು ಹಳೇ ಜೆಡಿಎಸ್ ಕಾರ್ಯಕರ್ತರು ಎಂದು ಚುನಾವಣೆಗೆ ಹೋಗುವ ಅವಕಾಶಗಳಿವೆ. ಇದರ ನಡುವೆ ಮಾಜಿ ಸಚಿವರು ಈ ಬಾರಿ ಪ್ರಬಲಕಾಂಕ್ಷಿಗಳೊAದಿಗೆ ಚುನಾವಣೆ ಎದುರಿಸುವ ಭರಾಟೆ ಕಂಡುಬರುತ್ತಿದೆ.

ಬಾಕ್ಸ್

ಹಲವರಿಗಿಲ್ಲ ಮತದಾನದ ಹಕ್ಕು

ಸೊಸೈಟಿಯಲ್ಲಿ ಒಟ್ಟು 2,188 ಸದಸ್ಯರಿದ್ದಾರೆ. ಆದರೆ, ಹಿಂದಿನ 5 ವಾರ್ಷಿಕ ಸಭೆಗಳಲ್ಲಿ 2ಕ್ಕಿಂತ ಹೆಚ್ಚು ಬಾರಿ ಗೈರಾದ 855 ಸದಸ್ಯರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. 1,303 ಮಂದಿ ಮತದಾರರ ಪಟ್ಟಿಯಲ್ಲಿ ಇದ್ದಾರೆ. ಸಾಲಗಾರರ ಕ್ಷೇತ್ರದಲ್ಲಿ 929 ಸದಸ್ಯರಲ್ಲಿ 278 ಹಾಗೂ ಸಾಲಗಾರರಲ್ಲದ ಕ್ಷೇತ್ರದ 1259 ಜನರಲ್ಲಿ 607 ಮಂದಿ ಮತದಾನ ಹಕ್ಕಿನಿಂದ ಅನರ್ಹಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net