

ಈ ಫೋಟೋ ನೋಡಿದ ತಕ್ಷಣ ಗೊಂದಲ ಆಗುವುದು ಸಹಜ. ಚಿರತೆ, ಹುಲಿ, ಕರಡಿ ಹಿಡಿಯಲು ಬಳಸುವ ಬೋನಿನಲ್ಲಿ ಖಾಕಿ ಧರಿಸಿದ ವ್ಯಕ್ತಿಯೊಬ್ಬರನ್ನು ಕೂರಿಸಿ, ಬಾವಿಗೆ ಬಿಡಲಾಗುತ್ತಿದೆಯಲ್ಲ..ಏನಿದು ಎಂದು ಕುತೂಹಲ ಉಂಟಾಗುತ್ತದೆ.
ಆದರೆ ವಿಷಯ ಬೇರೇನೇ ಇದೆ...ಈ ಪಾಳು ಬಾವಿ ತುಂಬ ಆಳವಾಗಿದ್ದು, ಗಿಡ, ಪೊದೆಗಳೆಲ್ಲ ಬೆಳೆದು ಕತ್ತಲಿನಿಂದ ಕೂಡಿದೆ. ಅದರಲ್ಲಿ ಚಿರತೆ ಬಿದ್ದಿದೆ ಎಂದು ಹಲವರು ಹೇಳಿದ್ದರು. ನಿಜಕ್ಕೂ ಅದರಲ್ಲಿ ಚಿರತೆ ಇದೆಯಾ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ, ನಾಗರಹೊಳೆ ಹುಲಿ ಸಂರಕ್ಷಿತ ಉದ್ಯಾನವನದ ರೇಂಜ್ ಆಫೀಸರ್ ಅವರು ಹೀಗೆ ಬೋನಿನಲ್ಲಿ ಬ್ಯಾಟರಿ ಹಿಡಿದುಕೊಂಡು ಕುಳಿತು, ಬಾವಿಯ ಆಳಕ್ಕೆ ಪ್ರವೇಶಿಸಿದ್ದರು. ಬಾವಿ ಕಟ್ಟೆ ಹತ್ತಿರ ನಿಂತ ಜನರು ಆ ಬೋನನ್ನು ಬಾವಿಯೊಳಗೆ ಬಿಟ್ಟು, ನಂತರ ಅಲ್ಲಿಂದ ಎತ್ತಿದ್ದಾರೆ. ಇದೀಗ ಆ ಬಾವಿಯೊಳಗೆ ಯಾವುದೇ ಚಿರತೆ ಬಿದ್ದಿಲ್ಲ ಎಂಬುದು ಖಚಿತವಾಗಿದೆ.