

Rangayana Raghu Shakahari movie: ರಂಗಾಯಣ ರಘು ನಟನೆಯ ‘ಶಾಖಾಹಾರಿ’ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ರಂಗಾಯಣ ರಘು ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ಯೋಗರಾಜ್ ಭಟ್ ಅವರು ಈ ಸಿನಿಮಾದ ಶೀರ್ಷಿಕೆ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.
ಕಾಮಿಡಿ ಆದರೂ ಸೈ, ಎಮೋಷನಲ್ ದೃಶ್ಯವಾದರೂ ಸೈ ಎಂಬಂತಹ ಪ್ರತಿಭಾವಂತ ಕಲಾವಿದ ರಂಗಾಯಣ ರಘು. ಪೋಷಕ ಪಾತ್ರಗಳ ಮೂಲಕ ಭಾರಿ ಬೇಡಿಕೆ ಸೃಷ್ಟಿಕೊಂಡಿರುವ ಅವರು ಈಗ ‘ಶಾಖಾಹಾರಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಅನಾವರಣ ಆಗಿದೆ. ಇದನ್ನು ಯೋಗರಾಜ್ ಭಟ್ ಅವರು ಬಿಡುಗಡೆ ಮಾಡಿದ್ದಾರೆ.
ರಂಗಾಯಣ ರಘು ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ಯೋಗರಾಜ್ ಭಟ್ ಅವರು ಈ ಸಿನಿಮಾದ ಶೀರ್ಷಿಕೆ ಪೋಸ್ಟರ್ ಅನ್ನು ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.
ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪೂರ್ತಿ ಮಲೆನಾಡಿನಲ್ಲೇ ಚಿತ್ರೀಕರಣ ಆಗಿರುವ ‘ಶಾಖಾಹಾರಿ’ ಸಿನಿಮಾದಲ್ಲಿ ಮಲೆನಾಡಿನ ಅನೇಕರು ಕೆಲಸ ಮಾಡಿದ್ದಾರೆ.
ರಂಗಾಯಣ ರಘು ಅವರ ಈ ಹಿಂದಿನ ಸಿನಿಮಾಗಳಿಂದ ‘ಶಾಖಾಹಾರಿ’ ಚಿತ್ರ ಸಖತ್ ಡಿಫರೆಂಟ್ ಆಗಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಂದೀಪ್ ಸುಂಕದ್ ಅವರು ಈ ಸಿನಿಮಾಗೆ ನಿರ್ದೇಶ ಮಾಡಿದ್ದಾರೆ. ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅನುಭವ ಅವರಿಗೆ ಇದೆ. ಸಹ-ನಿರ್ದೇಶಕನಾಹಗಿ, ಬರಹಗಾರರಾಗಿ ಅವರು ಅನುಭವ ಪಡೆದಿದ್ದಾರೆ.