ಗಮನ ಸೆಳೆದ ಮಹಿಳೆಯರಿಂದ ಪ್ರತಿಷ್ಠಾಪಿತ ಗಣಪತಿ

10-RNR-03
Published on

ರಾಣೆಬೆನ್ನೂರ: ಯುವಕರು ಒಟ್ಟಿಗೆ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂತಿರ್ ಪ್ರತಿಷ್ಠಾಪನೆ ಮಾಡುವುದು ಸಾಮಾನ್ಯ. ಆದರೆ, ನಗರದಲ್ಲಿ ಮಹಿಳೆಯರು ಸಹ ಸಂ ಮಾಡಿಕೊಂಡು ಸಾರ್ವಜನಿಕವಾಗಿ ಗಣಪತಿ ಮೂತಿರ್ ಪ್ರತಿಷ್ಠಾಪನೆ ಮಾಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ.
ಇಲ್ಲಿನ 25ನೇ ವಾರ್ಡ್​ನ ವ್ಯಾಪ್ತಿಯಲ್ಲಿ ಬರುವ ಸಿದ್ದಾರೂಢಮಠದ ಹಿಂಭಾಗದ ಶ್ರೀ ಬಸವ ಗ್ರೀನ್​ ಪಾರ್ಕ್​ ಏರಿಯಾದ ಮಹಿಳೆಯರು ಪ್ರಸಕ್ತ ವರ್ಷದಿಂದ ಈ ವಿನೂತನ ಕಾರ್ಯ ಮಾಡಿರುವುದು ಗಮನ ಸೆಳೆದಿದೆ.
ಈ ಲೇಔಟ್​ ವ್ಯಾಪ್ತಿಯಲ್ಲಿ ಸುಮಾರು 100 ಮನೆಗಳಿವೆ. ಇಲ್ಲಿ ಲೇಔಟ್​ ನಿಮಾರ್ಣದ ಮುನ್ನ ಅಲ್ಲಲ್ಲಿ ಡಾಂಬರಿಕರಣ, ಚರಂಡಿ ಬಿಟ್ಟರೆ ಉಳಿದ ಕೆಲಸಗಳು ಹಾಗೆ ಉಳಿದುಕೊಂಡಿತ್ತು. ಹೀಗಾಗಿ ಕಳೆದ ಎರಡ್ಮೂರು ವರ್ಷಗಳ ಹಿಂದೆ ಇಲ್ಲಿನ ನಿವಾಸಿಗಳು ಸೇರಿಕೊಂಡು ಈ ಪ್ರದೇಶವನ್ನು ಹಸಿರುಕರಣ ಮಾಡುವ ಉದ್ದೇಶದಿಂದ ಬಸವ ಗ್ರೀನ್​ ಪಾರ್ಕ್​ ಎಂದು ನಾಮಕರಣ ಮಾಡಿದ್ದು, ಸ್ವತಂ ಹಣದಲ್ಲಿ ಪಾರ್ಕ್​ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೆ ಪಾರ್ಕ್​ನಲ್ಲಿ ಈಶ್ವರ ದೇವಸ್ಥಾನ ನಿಮಿರ್ಸಿದ್ದಾರೆ. ಅಲ್ಲದೆ ಈ ವರ್ಷದಿಂದ ಮಹಿಳೆಯರು ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.
ಮೂರು ದಿನಗಳ ಪ್ರತಿಷ್ಠಾಪನೆ…
ಗಣೇಶ ಚರ್ತುಥಿ ದಿನದಿಂದು ಮೂತಿರ್ ಪ್ರತಿಷ್ಠಾಪನೆ ಮಾಡಿರುವ ಮಹಿಳಾ ಸಂಘ ಮೂರು ದಿನಗಳ ಕಾಲ ತಾವೆ ಬೆಳಗ್ಗೆ ಹಾಗೂ ಸಂಜೆ ಪೂಜೆ ನೆರವೇರಿಸಿದ್ದಾರೆ. ಸೋಮವಾರ ಸಂಜೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡು ನಂತರ ಗಣಪತಿ ವಿರ್ಸಜನೆ ಮಾಡಿದ್ದಾರೆ. ಈ ಎಲ್ಲ ಕಾರ್ಯಕ್ರಮಕ್ಕೂ ಮಹಿಳೆಯರು ಸ್ವತಂ ಹಣ ಬಳಕೆ ಮಾಡಿರುವುದು ಮತ್ತೊಂದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net