ಚಂದ್ರಶೇಖರ ಅವರಿಗೆ ಪಿಎಚ್​.ಡಿ ಪ್ರದಾನ

20-RNR-06 chandrashekar
Published on

ರಾಣೆಬೆನ್ನೂರ: ನಗರದ ಬಿಎಜೆಎಸ್​ಎಸ್​ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕ ಚಂದ್ರಶೇಖರ ಎಂ.ಕೆ. ಅವರಿಗೆ ದಾವಣಗೆರೆ ವಿಶ್ವ ವಿದ್ಯಾಲಯ ಪಿಎಚ್​.ಡಿ ಪ್ರದಾನ ಮಾಡಿದೆ.
ಇವರು ದಾವಣಗೆರೆ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ವೆಂಕಟರಾವ ಪಲಾಟೆ ಹಾಗೂ ಡಾ. ಅಶೋಕಕುಮಾರ ಪಾಳೇದ ಅವರ ಮಾರ್ಗದರ್ಶನದಲ್ಲಿ ದ ಹಿಸ್ಟಾರಿಕಲ್​ ಸ್ಟಡಿ ಆಫ್​ ಬ್ಯಾಕ್ವರ್ಡ್​ ಕ್ಲಾಸಸ್​ ಮೂವ್ಮೆಂಟ್​ ಇನ್​ ಕರ್ನಾಟಕ: ಚಾಲೆಂಜಸ್​ ಆ್ಯಂಡ್​ ಇಂಪ್ಯಾಕ್ಟ್​ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net