ವಾಲ್ಮೀಕಿ ಮಹಾಸಭಾದ ಯುವ ಘಟಕಕ್ಕೆ ಚಂದ್ರಪ್ಪ ಆಯ್ಕೆ

23-RNR-04
Published on

ರಾಣೆಬೆನ್ನೂರ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕ ಯುವ ಘಟಕದ ಅಧ್ಯಕ್ಷರನ್ನಾಗಿ ಚಂದ್ರಪ್ಪ ಬನ್ನಿಹಟ್ಟಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಸಂಜೀವ ಶಿಡಗನಾಳ, ಹಾವೇರಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಜು ಮಾದಮ್ಮನವರ ಅವರನ್ನು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಲಾಯಿತು.
ನಗರದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ ಹಾಗೂ ತಾಲೂಕು ಅಧ್ಯಕ್ಷ ಚಂದ್ರಪ್ಪ ಬೇಡರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಯುವ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ಬಡಮ್ಮನವರ, ಪ್ರಮುಖರಾದ ರಾಯಣ್ಣ ಮಾಗನೂರ, ಕರಬಸಪ್ಪ ಕೂಲೇರ, ಭೀಮಣ್ಣ ಎಡಚಿ, ಹನುಮಂತಪ್ಪ ಮೀನಕಟ್ಟಿ, ನಾಗಣ್ಣ ಸಣ್ಮನಿ, ಬಸವರಾಜ ಕಡೇಮನಿ ಮತ್ತಿತರರು ಪಾಲೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net