ಗರ್ಭ ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯರಿಂದ ಉಪವಾಸ ಸತ್ಯಾಗ್ರಹ

2-RNR-04
Published on

ರಾಣೆಬೆನ್ನೂರ: ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಿ. ಶಾಂತ ಅವರಿಂದ ಅನಧಿಕೃತ ಗರ್ಭಶಸ್ತ್ರ ಚಿಕಿತ್ಸೆಗೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಂತ್ರಸ್ತ ಮಹಿಳೆಯರು ನಗರದ ಮಿನಿ ವಿಧಾನಸೌಧದ ಎದುರು ಬುಧವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಸಂತ್ರಸ್ತ ಮಹಿಳೆಯರಿಗೆ ಪರಿಹಾರ ನೀಡಲು ಆಗ್ರಹಿಸಿ 2016ರಿಂದ ಹೋರಾಟ ಮಾಡುತ್ತ ಬರಲಾಗಿದೆ. ಆದರೆ, ಈವರೆಗೂ ಯಾವ ಸರ್ಕಾರ, ಸಚಿವರು, ಮುಖ್ಯಮಂತ್ರಿ, ಶಾಸಕರು ನಮಗೆ ಸ್ಪಂದಿಸಿಲ್ಲ. ಈವರೆಗೂ 75 ಬಾರಿ ಮನವಿ ಸಲ್ಲಿಸಲಾಗಿದೆ.
ಪರಿಹಾರಕ್ಕಾಗಿ ಈಗಾಗಲೇ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ. ಆದ್ದರಿಂದ ಗಾಂಧಿ ಜಯಂತಿ ದಿನದಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ. ಸರ್ಕಾರ ಪರಿಹಾರ ನೀಡುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪ್ರಮುಖರಾದ ಜಗದೀಶ ಕೆರೂಡಿ, ರವೀಂದ್ರಗೌಡ ಪಾಟೀಲ, ಲಲಿತವ್ವ ಲಮಾಣಿ, ಶೈಲಾ ರಂಗರೆಡ್ಡಿ, ಕ್ಕೀರವ್ವ ಮಲ್ಲಾಪುರ, ಲಕ್ಷ$್ಮವ್ವ ಲಮಾಣಿ, ಗಿರಿಜವ್ವ ಚಕ್ರಸಾಲಿ, ಲಲತಾ ಂಟಿ, ಗಂಗವ್ವ ಲಮಾಣಿ, ಶಂಕ್ರಮ್ಮ ಹಾವೇರಿ, ಲಕ್ಷ$್ಮವ್ವ ಮಣಕೂರ, ದ್ಯಾಮವ್ವ ಲಮಾಣಿ, ಶಾಂತವ್ವ ಲಮಾಣಿ, ಗೀತಾ ಲಮಾಣಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net