ನಿತ್ಯ ದುರ್ಗಾ ಆರಾಧನೆ ಮಾಡಿದರೆ ದುರ್ಗತಿ ದೂರ; ಶಿವಯೋಗಿ ಸ್ವಾಮೀಜಿ

23-RNR-07
Published on

ರಾಣೆಬೆನ್ನೂರ: ನಿತ್ಯ ದುರ್ಗಾ ಆರಾಧನೆ ಮಾಡಿದರೆ ಮನುಜನಲ್ಲಿನ ದುರ್ಗತಿಗಳು ದೂರವಾಗಿ ಅಂತರಂಗದಲ್ಲಿ ಜಾಗೃತಿ ಮೂಡಿ ಹೊಸ ಚೈತನ್ಯ ತರುತ್ತದೆ ಎಂದು ಶನೈಶ್ಚರ ಮಂದಿರದ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಶನೈಶ್ಚರ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಯ ದ್ವಿತೀಯ ಮಂಡಲೋತ್ಸವ, ಮಹಾಸಂಕಲ್ಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಬಹುತೇಕ ಜನರಲ್ಲಿ ಧರ್ಮದ ಬಗ್ಗೆ ಅಭಿಮಾನ, ಗೌರವ ಕಡಿಮೆಯಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ. ಇದರಿಂದ ಧರ್ಮದ ಅವನತಿ ಸೇರಿ ಮನುಜನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮ ಜೀವನವನ್ನು ಸದಾ ಸಂತುಷ್ಟಗೊಳಿಸುತ್ತದೆ ಎಂದರು.
ಕೇಂದ್ರ ಆದಾಯ ತೆರಿಗೆಯ ಆಯುಕ್ತ (ಐಆರ್‌ಎಸ್) ಶ್ರೀನಿವಾಸ ಬಿದರಿ ಮಾತನಾಡಿದರು. ಮಠದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ವಿಶ್ವರಾಧ್ಯ ಹಿರೇಮಠ ಧರ್ಮದ ಕುರಿತು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net