ಗ್ರಂಥಾಲಯದ ಪುಸ್ತಕಗಳನ್ನು ಸದ್ಭಳಕೆ ಮಾಡಿಕೊಳ್ಳಿ: ಸೀತಾ ಕೋಟಿ

3-RNR-04
Published on

ರಾಣೆಬೆನ್ನೂರ: ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ದೊರೆಯುವ ಪುಸ್ತಕಗಳನ್ನು ಸರಿಯಾಗಿ ಅಧ್ಯಯನ ಮಾಡಿ ಹೊಸ ಹೊಸ ಸಂಶೋಧನೆಗೆ ಮುಂದಾಗಬೇಕು ಎಂದು ಆರ್‌ಟಿಇಎಸ್ ಕಾಲೇಜ್‌ನ ಕಾರ್ಯದರ್ಶಿ ಸೀತಾ ಕೋಟಿ ಹೇಳಿದರು.
ಸ್ಥಳೀಯ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗ ಮತ್ತು ಆಂತರಿಕ ಗುಣಮಟ್ಟ ಘಟಕದ ಮಾಹಿತಿ ಕೇಂದ್ರಗಳ ಸಹಯೋಗದಲ್ಲಿ ಸೋಮವಾರ ಎನ್-ಲಿಸ್ಟ್ ಸಂಪನ್ಮೂಲಗಳ ಅರಿವು ಎಂಬ ವಿಷಯ ಕುರಿತು ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಎಲ್ಲೆಡೆಯೂ ಕಂಪ್ಯೂಟರ್ ತಂತ್ರಜ್ಞಾನ ಪ್ರವೇಶಿಸಿದೆ. ಗ್ರಂಥಾಲಯಗಳು ಕೂಡ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನ ಅಳವಡಿಸಿಕೊಂಡು ಆಧುನಿಕವಾಗಿವೆ. ವಿದ್ಯಾರ್ಥಿಗಳು ಗ್ರಂಥಾಲಯದಿಂದ ದೊರೆಯುವ ಮಾಹಿತಿ ಪಡೆದು ಗುಣಮಟ್ಟದ ಅಧ್ಯಯನಕ್ಕೆ ಮುಂದಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಸುಭಾಸ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಎನ್-ಲಿಸ್ಟ್ ಸಂಪನ್ಮೂಲಗಳ ಅರಿವು ವಿಷಯ ಕುರಿತು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿ ಗ್ರಂಥಪಾಲಕ ಡಾ. ಎಂ.ಎನ್. ಮೂಲಿಮನಿ ಉಪನ್ಯಾಸ ನೀಡಿದರು.
ಪ್ರಾಚಾರ್ಯ ಸಿ.ಎ. ಹರಿಹರ, ಕಾರ್ಯಕ್ರಮ ಸಂಯೋಜಕ ಡಾ. ಪಿ.ಬಿ. ಕೊಪ್ಪದ, ಡಾ. ಮಧುಕುಮಾರ ಆರ್., ಸಿ.ಎನ್. ಪೂಜಾರ, ಡಾ. ಸರಸ್ವತಿ ಬೊಮ್ಮನಾಳ, ಮಾನಸಾ, ಅಂಜನಾ ಪವಾರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net