ರಂಗನಾಥ ಸ್ವಾಮಿ ಮಠದಲ್ಲಿ ಧಾಮಿರ್ಕ ಕಾರ್ಯಕ್ರಮ ಸೆ. 2ರಿಂದ

je721538035802367-abc
Published on

ರಾಣೆಬೆನ್ನೂರ: ಇಲ್ಲಿಯ ರಂಗನಾಥ ನಗರದ ನಿರಂಜನ ಮೌನಿ ಶಿವಯೋಗಿಶ್ವರ ಸದ್ಗುರು ರಂಗನಾಥ ಸ್ವಾಮಿ ಮಠದಲ್ಲಿ ಸೆ. 2 ಹಾಗೂ 3ರಂದು ಶ್ರಾವಣ ಮಾಸದ ಪ್ರಯುಕ್ತ ವಿವಿಧ ಧಾಮಿರ್ಕ ಕಾರ್ಯಕ್ರಮ ಜರುಗಲಿವೆ.
2ರಂದು ಬೆಳಗ್ಗೆ 6.30ಕ್ಕೆ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ನಂತರ ಶಿವನಾಮ ಸ್ಮರಣೆ ಹಾಗೂ ಭಜನೆ ಪ್ರಾರಂಭವಾಗಲಿದೆ. 3ರಂದು ಬೆಳಗ್ಗೆ 6ಗಂಟೆಗೆ ಭಜನೆ ಸಮಾಪ್ತಿಗೊಳ್ಳುವುದು. ನಂತರ ರಂಗನಾಥ ಸ್ವಾಮಿಯ ಸೇವಾ ಕಾರ್ಯಕ್ರಮ ಜರುಗಲಿವೆ. ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪನೆ ನಡೆಯುವುದು. ರಾತ್ರಿ 8 ಗಂಟೆಗೆ ವಿಭೂತಿ ವಿತರಣೆ ಸೇರಿ ವಿವಿಧ ಧಾಮಿರ್ಕ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net