ಪ್ಲಾಸ್ಟಿಕ್​ ಮಾರಾಟ; 231 ಕೆ.ಜಿ. ಪ್ಲಾಸ್ಟಿಕ್​ ವಶ, 34 ಸಾವಿರ ರೂ. ದಂಡ ವಸೂಲಿ

22-RNR-03
Published on

ರಾಣೆಬೆನ್ನೂರ: ನಗರದ ನೆಹರು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್​ ಬ್ಯಾಗ್​ ಸೇರಿ ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ನಗರಸಭೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು 231 ಕೆ.ಜಿ. ಪ್ಲಾಸ್ಟಿಕ್​ ವಶಪಡಿಸಿಕೊಂಡು 34 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.

ನಗರದ ನೆಹರು ಮಾರುಕಟ್ಟೆಯಲ್ಲಿ ಕೆಲಸ ಅಂಗಡಿಕಾರರು ನಿಷೇಧಿತ ಪ್ಲಾಸ್ಟಿಕ್​ ಕ್ಯಾರಿ ಬ್ಯಾಗ್​ ಸೇರಿ ಇತರ ಉತ್ಪನ್ನ ಮಾರಾಟ ಮಾಡುತ್ತಿದ್ದರು. ಈ ಕುರಿತು ದಾಳಿ ನಡೆಸಿದ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್​ ವಶಪಡಿಸಿಕೊಂಡಿದ್ದಾರೆ. ಅದನ್ನು ನಗರಸಭೆ ನ ತ್ಯಾಜ್ಯ ವಿಲೇವಾರಿ ಟಕದಲ್ಲಿ ನಾಶಪಡಿಸಲಾಯಿತು.

ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ಸದಸ್ಯ ಮಲ್ಲಣ್ಣ ಅಂಗಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಲೋಹಿತಕುಮಾರ ಪಿ.ಜೆ, ಶಿವಾನಂದ ದೊಡ್ಡಮನಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net