ಕರಾಟೆ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ

31-RNR-06
Published on

ರಾಣೆಬೆನ್ನೂರ: ಹುಬ್ಬಳ್ಳಿಯ ಅಪ್ಲೇರ್​ ಸ್ಪೊರ್ಟ್ಸ ಅಕಾಡೆಮಿ ಗೋಜೋರಿಯೋ ಕಾರಾಟೆ ಡು ಸುಕಾರ ಕಾಯ್​ ಇಂಡಿಯಾ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 1ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಗರದ ವಿಜಯ ಅಗಡಿ ಮಾರ್ಷಲ್​ ಆರ್ಟ್ಸ್​ ಕ್ಲಬ್​ನ ಕರಾಟೆ ಪಟುಗಳು ವಿವಿಧ ವಿಭಾಗದಲ್ಲಿ ಸ್ಪಧಿರ್ಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಬಾಲಕ ಮತ್ತು ಬಾಲಕಿಯರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸ್ಪಧಿರ್ಸಿ ಒಟ್ಟಾರೆಯಾಗಿ ಚಿನ್ನ 16, ಬೆಳ್ಳಿ 12 ಮತ್ತು 9 ಕಂಚಿನ ಪದಕಗಳನ್ನು ಪಡೆದು ಟೀಮ್​ ಚಾಂಪಿಯನ್​ಶಿಪ್​ ಟ್ರೋಫಿ ಗೆದ್ದಿದ್ದಾರೆ.

ಪ್ರಥಮ ವಿಭಾಗದಲ್ಲಿ ಕರಾಟೆ ಪಟುಗಳಾದ ಸಾನ್ವಿತ್​ ಎಂ.ಕೆ., ವಿಜಯ ಎಂ.ಕೆ., ಸನ್ನಿದಿ, ಮಾಹುಲ್​ ಬಿ.ಎನ್​., ವಿಕ್ಕಿ ಮಾಲೆ, ಭವಿತ್​ ರೆಡ್ಡಿ, ಭುವನ ಡಬ್ಲೂ, ಭರತ ಕೆ., ಶರದಿ ನಾಯಕ, ಸಂಜೀವಕುಮಾರ ಬನ್ನಿಕೋಡ, ಝಮೀನ್​ ಗೌಸ್​ ಜಯಗಳಿಸಿದ್ದಾರೆ ಎಂದು ಕ್ಲಬ್​ನ ತರಬೇತಿದಾರ ವಿಜಯ ಅಂಗಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net