ಸಮಾಜಮುಖಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ; ಮಧುಸೂದನ

oplus_0
oplus_0
Published on

ರಾಣೆಬೆನ್ನೂರ: ಸಮಾಜಮುಖಿ ಕಾರ್ಯಗಳಲ್ಲಿ ಸಂಘ ಸಂಸ್ಥೆಗಳ ಹೆಚ್ಚಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಜೇಸಿಐ ವಲಯ ಉಪಾಧ್ಯಕ್ಷ ಮಧುಸೂದನ ನವಡ ಹೇಳಿದರು.

ನಗರದ ದೈವಜ್ಞ ಸಮುದಾಯ ಭವನದಲ್ಲಿ ಬುಧವಾರ ರಾತ್ರಿ ಜೇಸಿಐ (ಜ್ಯೂನಿಯರ್​ ಚೇಂಬರ್​ ಇಂಟರ್​ನ್ಯಾಶನಲ್​) ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜೀವ ನಮ್ಮ ಮಾತು ಕೇಳುವುದಿಲ್ಲ, ಜೀವನ ನಮ್ಮ ಮಾತು ಕೇಳುತ್ತದೆ. ಈ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಲು ಜೆಸಿಐ ಸಂಸ್ಥೆ ದಾರಿದೀಪವಾಗಿದೆ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳು ಮಾಡಬೇಕು ಎಂದರು.

ಜೇಸಿಐ ವಲಯಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ವಲಯ- 24ರ ಅಧ್ಯಕ್ಷ ಗೌರೀಶ ಭಾರ್ಗವ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ನೂತನ ಅಧ್ಯಕ್ಷ ಕುಮಾರ ಬೆಣ್ಣಿ, ಉಪಾಧ್ಯಕ್ಷ ಅಶೋಕ ದುರ್ಗದಶೀಮಿ, ಚಂದನ ಹಿತ್ತಲಮನಿ, ವಿನಾಯಕ ಕಾಕಿ, ಸಾಯಿನಾಥ ಗೋಂದಕರ, ಆಕರ್ಶ ಬಸ್ಮಾಂಗಿಮಠ, ವಿನಾಯಕ ಗುಲಗಂಜಿ, ರೇಖಾ ಬೆಣ್ಣಿ, ಕಾರ್ಯದಶಿರ್ ಇಮ್ರಾನ್​ ನೀಲಗಾರ, ಸಹ ಕಾರ್ಯದಶಿರ್ ವಿನಾಯಕ ಯಕನಹಳಿ, ಖಜಾಂಚಿ ವಿದ್ಯಾದರ ಹಲಗೇರಿ ಹಾಗೂ ಇತರ ಸದಸ್ಯರು ಅಧಿಕಾರ ಸ್ವೀಕರಿಸಿದರು.

ಸಂಸ್ಥೆಯ ಪೂರ್ವಾಧ್ಯಕ್ಷ ಶ್ರೀನಿವಾಸ ಕಾಕಿ, ಲಕ್ಷಿ$್ಮ ಅಡಕಿ, ವಿ.ಎಸ್​. ಹಿರೇಮಠ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಆರ್​.ವಿ.ಪಾಟೀಲ, ಗಣೇಶ ದೇವಗಿರಿಮಠ, ಪ್ರಮುಖರಾದ ಭೋಜರಾಜ ಗುಲಗಂಜಿ, ಲಕ್ಷಿ$್ಮ ಶಿವಶಂಕರ, ರೂಪಾ ಕಾಕಿ, ಲಕ್ಷಿ$್ಮ ಎಸ್​, ಸಿದ್ದಪ್ಪ ಅತಡಕರ, ಕೋಟ್ರೇಶಪ್ಪ ಎಮ್ಮಿ, ಶಿವಪ್ಪ ಗುರಿಕಾರ, ಸಂಜೀವ ಶಿರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net