ಜೈನ್ ಮುನಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ; ಜೈನ್ ಸಮಾಜದವರ ಆಗ್ರಹ

14-RNR-03
Published on

ರಾಣೆಬೆನ್ನೂರ: ಜೈನ್ ಮುನಿಗಳ ಹತ್ಯೆ ಖಂಡಿಸಿ ಇಲ್ಲಿಯ ಜೈನ್ ಶ್ವೇತಾಂಬರ ಸಂಘದ ವತಿಯಿಂದ ಶುಕ್ರವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು.
ನಗರದ ಜೈನ್ ಮಂದಿರದಿಂದ ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಹಳೆ ಪಿ.ಬಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಮೌನ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ತಲುಪಿದರು. ನಂತರ ತಹಸೀಲ್ದಾರ್ ಕೆ. ಗುರುಬಸವರಾಜ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೈನ್ ಶ್ವೇತಾಂಬರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಜೈನ್ ಮಾತನಾಡಿ, ಜೈನ್ ಮುನಿಗಳಾದ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಮಾಡಿರುವುದು ಖಂಡನೀಯ. ಮಹಾರಾಜರನ್ನು ಅತಿ ಹಿಂಸಾತ್ಮಕವಾಗಿ ಹತ್ಯೆ ಮಾಡಿರುವ ಘಟನೆ ಜೈನ್ ಸಮಾಜ ಮತ್ತು ಮನುಕುಲಕ್ಕೆ ಅಘಾತವನ್ನುಂಟು ಮಾಡಿದೆ.
ಇಂತಹ ಘಟನೆಗಳು ಜೈನ್ ಸಮಾಜ ಹಾಗೂ ನಾಗರಿಕರಲ್ಲಿ ಅತಿಯಾದ ದುಷ್ಪರಿಣಾಮ ಬೀರುತ್ತವೆ. ಮುನಿಗಳನ್ನು ಹತ್ಯೆ ಮಾಡಿದ ಹಂತಕರಿಗೆ ಕಠಿಣದಲ್ಲಿ ಕಠಿಣ ಶಿಕ್ಷೆ ಆಗಬೇಕು. ಶಾಂತಿ ಪ್ರಿಯರಾದ ಮುನಿಗಳಿಗೆ ಮತ್ತು ಸಾಧುಗಳು, ಸಾದ್ವಿಗಳಿಗೆ ಸೂಕ್ತ ಭದ್ರತೆ ನೀಡಿ ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net