

ರಾಣೆಬೆನ್ನೂರ: ಶ್ರೀದಲ್ಲಿ ಸಚಿವ ಮಧು ಬಂಗಾರಪ್ಪ, ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅನುದಾನಿತ ಕಾಲೇಜು ನೌಕರರ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ನೌಕರರ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುವುದು. ಅವರ ಬೇಡಿಕೆಗಳ ಇತ್ಯರ್ಥಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಬಿಎಜೆಎಸ್ಎಸ್ ಕಾಲೇಜ್ನಲ್ಲಿ ಭಾನುವಾರ ಏರ್ಪಡಿಸಿದ್ದ ಅನುದಾನಿತ ಪದವಿ ಪೂರ್ವ ಕಾಲೇಜ್ನ ನೌಕರರ ಹಾವೇರಿ ಜಿಲ್ಲಾ ಘಟಕ ಉದ್ಘಾಟಿ ಅವರು ಮಾತನಾಡಿದರು.
ವಿಶೇಷ ತರಗತಿಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಚಾರ್ಯರು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಶ್ರಮಿಸಿದರೆ ವಿದ್ಯಾಥಿರ್ಗಳ ಸಂಖ್ಯೆ ಹೆಚ್ಚಾಗುತ್ತದೆ. ಆದರೆ "ಸಂತೆ ಮಾಡಲು ರೊಕ್ಕ ಸಿಕ್ಕರೆ ಸಾಕು" ಎನ್ನುವ ಆಡಳಿತದಿಂದ ಕ್ವಾಲಿಟಿ, ಕ್ವಾಂಟಿಟಿ ಎರಡೂ ಸಿಗಲಾರದು. ಆದ್ದರಿಂದ ವಿದ್ಯಾಥಿರ್ಗಳಿಗೆ ಗುಣಮಟ್ಟದ ಶಿಕ್ಷಣ ನೀಡೋಣ ಎಂದರು.
ವಿದ್ಯಾಥಿರ್ಗಳ ಭವಿಷ್ಯ ರೂಪಿಸುವ ಈ ಪದವಿ ಪೂರ್ವ ಹಂತದ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಅವರ ಉತ್ತಮ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ಕೊಡುವಂತೆ ಹಾಗೂ ಜನಸಂಖ್ಯೆಯ ಅರ್ಧದಷ್ಟು ಅಂದರೆ 70 ಕೋಟಿಯಷ್ಟು ಇರುವ ಮಹಿಳೆಯರು ಸಹ ಉತ್ತಮ ಶಿಕ್ಷಣ ಪಡೆದು ಅಭಿವೃದ್ಧಿಯಲ್ಲಿ ಪಾಲುದಾರರು ಆಗಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಂ. ಕುಬೇರಪ್ಪ, ರಾಜ್ಯ ಸಂಘದ ಅಧ್ಯಕ್ಷ ಡಾ. ಹರೀಶ, ಸಿಂಡಿಕೇಟ್ ಸದಸ್ಯ ರಮೇಶ ಲಮಾಣಿ, ಎನ್ಎಸ್ಎಸ್ ಅಧಿಕಾರಿ ರವಿಕುಮಾರ ಅಂಬೋರೆ, ಪ್ರಾಚಾರ್ಯರ ಸಂಘದ ಜಿಲ್ಲಾದ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಜಿಲ್ಲಾಧ್ಯಕ್ಷ ಪರಶುರಾಮ ಗಚ್ಛಿನಮನಿ ಮತ್ತಿತರರು ಉಪಸ್ಥಿತರಿದ್ದರು.