

ರಾಣೆಬೆನ್ನೂರ: ಸರ್ಕಾರದಿಂದ ಪರಿಹಾರಕ್ಕಾಗಿ ಆಗ್ರಹಿಸಿ ನಗರದ ಮಿನಿ ವಿಧಾನಸೌಧ ಎದುರು ಎರಡು ದಿನದಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದ ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು 3ನೇ ದಿನವಾದ ಶುಕ್ರವಾರ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.
ಈ ಕುರಿತು ಸತ್ಯಾಗ್ರಹದ ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಗುರುವಾರ ರಾತ್ರಿ ಸ್ಥಳಿಯರು ಶಾಸಕರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ್ದಾರೆ. ಒಂದು ವಾರದೊಳಗೆ ನೊಂದ ಮಹಿಳೆಯರನ್ನು ಸಂಬಂಧಪಟ್ಟ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿ ಮಾಡಿಸುತ್ತೇನೆ. ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದ್ದರಿಂದ ಸದ್ಯ ಸತ್ಯಾಗ್ರಹ ಹಿಂತೆಗೆದುಕೊಂಡಿದ್ದೇವೆ. ಆದರೆ, ಶಾಸಕರು ಹೇಳಿದಂತೆ ನಡೆದುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಅವರ ಮನೆ ಎದುರು ಸತ್ಯಾಗ್ರಹ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.
ಸ್ಥಳಕ್ಕೆ ಬಂದ ಗ್ರೇಡ್&2 ತಹಸೀಲ್ದಾರ್ ಅರುಣ ಕಾಗಿರ್ ಮಹಿಳೆಯರಿಗೆ ಎಳ್ಳನಿರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.
ಪ್ರಮುಖರಾದ ಲಲಿತವ್ವ ಲಮಾಣಿ, ಶೈಲಾ ರಂಗರೆಡ್ಡಿ, ಕ್ಕೀರವ್ವ ಮಲ್ಲಾಪುರ, ಲಕ್ಷ$್ಮವ್ವ ಲಮಾಣಿ, ಗಿರಿಜವ್ವ ಚಕ್ರಸಾಲಿ, ಲಲತಾ ಂಟಿ, ಗಂಗವ್ವ ಲಮಾಣಿ, ಶಂಕ್ರಮ್ಮ ಹಾವೇರಿ, ಲಕ್ಷ$್ಮವ್ವ ಮಣಕೂರ, ದ್ಯಾಮವ್ವ ಲಮಾಣಿ, ಶಾಂತವ್ವ ಲಮಾಣಿ, ಗೀತಾ ಲಮಾಣಿ ಮತ್ತಿತರರು ಇದ್ದರು.