

ರಾಣೆಬೆನ್ನೂರ: ಇಲ್ಲಿಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚನೆ ಕುರಿತ ವಿಷಯ ಬಂದಾಗ ತಮ್ಮ ಸಂಖ್ಯಾಬಲದ ಅರಿವಿಲ್ಲದೆ ವಿಷಯ ಮಂಡನೆಗೆ ಅನುಮೋದನೆ ನೀಡಿದ ನಗರಸಭೆ ಅಧ್ಯೆ ಚಂಪಕ್ಕ ಬಿಸಲಹಳ್ಳಿ ಪೇಚೆಗೆ ಸಿಲುಕಿದ ಟನೆ ಗುರುವಾರ ನಡೆಯಿತು.
ನಗರಸಭೆ ಸ್ಥಾಯಿ ಸಮಿತಿ ರಚನೆ ವಿಷಯ ಬಂದಾಗ ಆಡಳಿತ ಪಕ್ಷದ ಸದಸ್ಯ ಹುಚ್ಚಪ್ಪ ಮೇಡ್ಲೇರಿ 9 ಜನ ಸದಸ್ಯರ ಹೆಸರು ಹೇಳಿ ವಿಷಯ ಸೂಚಿಸಿದರು. ಇದಕ್ಕೆ ನಿಂಗರಾಜ ಕೋಡಿಹಳ್ಳಿ ಅನುಮೋದಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯ ಪ್ರಕಾಶ ಬುರಡಿಕಟ್ಟಿ ಈ ವಿಷಯ ಅನುಮೋದನೆಗೆ ಸಭೆಯಲ್ಲಿ ನಿಮ್ಮ ಸದಸ್ಯರ ಸಂಖ್ಯಾಬಲ ಕಡಿಮೆಯಿದ್ದು, ಈ ನೂತನ ಸ್ಥಾಯಿ ಸಮಿತಿಗೆ ನಮ್ಮ ವಿರೋಧವಿದ್ದು, ನಾವುಗಳು ಸೇರಿ ನೂತನವಾಗಿ ಹೊಸ ಸ್ಥಾಯಿ ಸಮಿತಿ ರಚನೆ ಮಾಡುತ್ತೇವೆ ಎಂದು 9 ಜನ ಬಿಜೆಪಿ ಸದಸ್ಯರ ಹೆಸರು ಉಪ ಸೂಚನೆ ಕೊಟ್ಟರು. ಅದಕ್ಕೆ ಪ್ರಕಾಶ ಪೂಜಾರ ಅನುಮೋದಿಸಿದರು.
ನಡೆಯಿತು ಹೈಡ್ರಾಮಾ....
ಪ್ರಕಾಶ ಬುರಡಿಕಟ್ಟಿ ಮಂಡಿಸಿ ಉಪ ಸೂಚನೆ ಬಳಿಕ ಅಧ್ಯೆ ಚಂಪಕ್ಕ ಬಿಸಲಹಳ್ಳಿ ಇದನ್ನು ಮತ ಹಾಕಬೇಕಿತ್ತು ಅಥವಾ ಉಪ ಸೂಚನೆಯಂತೆ ಸ್ಥಾಯಿ ಸಮಿತಿ ರಚನೆ ಮಾಡಬೇಕಿತ್ತು. ಆದರೆ, ಅಧ್ಯಕ್ಷರು ತಮ್ಮ ಸಂಖ್ಯಾಬಲ ಕಡಿಮೆ ಇರುವುದು ಖಾತ್ರಿಯಾದ ಕೂಡಲೇ ಏಕಾಏಕಿ ಮೂರು ದಿನ ಬಿಟ್ಟು ಈ ವಿಷಯ ಚರ್ಚೆ ಮಾಡೋಣ ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಕಾಶ ಬುರಡಿಕಟ್ಟಿ, ವಿಷಯ ಮಂಡಿಸಿದ ಬಳಿಕ ಅದನ್ನು ಮುಂದೂಡಲು ಅವಕಾಶವಿರುವುದಿಲ್ಲ. ಅಲ್ಲದೆ ಇದು ಪೌರಾಡಳಿತ ಕಾಯ್ದೆ ಪ್ರಕಾರ ಉಲ್ಲಂನೆ ಆಗಲಿದೆ ಎಂದು ತಿಳಿಸಿದರು. ಆದರೂ ಅಧ್ಯೆ ಚಂಪಾ ಬಿಸಲಹಳ್ಳಿ ಸಭೆಯನ್ನು ಮುಂದೂಡಿ ಹೊರ ನಡೆದರು.
ಆಗ ಆಕ್ರೋಶಗೊಂಡ ವಿರೋಧ ಪಕ್ಷದ ಎಲ್ಲ ಸದಸ್ಯರು, ಸಭೆ ಮುಂದೂಡಲು ಅವಕಾಶವಿಲ್ಲ ಎಂದು ಆಡಳಿತ ಪಕ್ಷದವರ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಆಯುಕ್ತರಿಗೆ ತಿಳಿಸಿದರೂ ಆಯುಕ್ತರು ಮಾತ್ರ ಇದು ಅಧ್ಯಕ್ಷರ ನೀರ್ಣಯ ನಾನೇನೂ ಮಾಡಲು ಆಗಲ್ಲ ಎಂದು ಹೊರ ನಡೆದರು.