ಶುದ್ಧ ಗಾಳಿ, ನೀರು ಪರಿಸರ ಕೊಡುವ ಸಂಕಲ್ಪ ಮಾಡಿ; ಡಾ. ಕುಬೇರಪ್ಪ

je721538035802367-abc
Published on

ರಾಣೆಬೆನ್ನೂರ: ವಿದ್ಯಾಥಿರ್ನಿಯರು ಮುಂದಿನ ಯುವ ಪೀಳಿಗೆಗೆ ಶುದ್ಧ ಗಾಳಿ, ನೀರು, ಆಹಾರ ಮತ್ತು ಪರಿಸರ ಕೊಡುವ ಸಂಕಲ್ಪ ಮಾಡಬೇಕು ಎಂದು ಆಡಳಿತಾಧಿಕಾರಿ ಡಾ. ಆರ್​.ಎಂ. ಕುಬೇರಪ್ಪ ಹೇಳಿದರು.

ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಮಂಗಳವಾರ ನಗರದ ಬಿ.ಎ.ಜೆ.ಎಸ್​.ಎಸ್​. ಸ್ವತಂತ್ರ ಪದವಿ-ಪೂರ್ವ ಮಹಿಳಾ ಕಾಲೇಜ್​ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಎಚ್​.ಬಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ. ಸರಿತಾ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು.

ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ನಾಗರಾಜ ಕುಡಪಲಿ, ಕೆ.ಎಂ. ಕೋರ್ಲಹಳ್ಳಿ, ಮಲ್ಲಿಕಾರ್ಜುನ ಪಿ.ಎಂ., ದೇವೆಂದ್ರಪ್ಪ. ಪಿ.ಎಸ್​., ಪ್ರಶಾಂತ ಕೆ., ಲತಾ ಧೂಳೆಹೊಳಿ, ಬೀರೇಶ ಚೌಡಣ್ಣನವರ, ಅಶೋಕ ಬಣಕಾರ, ಲಚ್ಚನಾಯ್ಕ ಎಲ್​., ನೇತ್ರಾ ಆರ್​. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net