

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ವಿವಿಧ ಶಾಲಾ-ಕಾಲೇಜ್, ಸಂಘ-ಸಂಸ್ಥೆಗಳ ವತಿಯಿಂದ ಮಂಗಳವಾರ 77ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಮಾತಾ ಪಬ್ಲಿಕ್ ಸ್ಕೂಲ್: ಇಲ್ಲಿಯ ಚೋಳ ಮರಡೇಶ್ವರ ನಗರ ಮಾತಾ ಪಬ್ಲಿಕ್ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಶಂಭುನಾಥ ಕೊಟ್ಟೂರ ಧ್ವಜರೋಹಣ ನೆರವೇರಿಸಿದರು. ಅಧ್ಯಕ್ಷ ಬಿ.ಎಚ್. ಮಡ್ಲೂರ, ವ್ಯವಸ್ಥಾಪಕ ಚನಬಸಪ್ಪ ಎಸ್., ಲತಾ ಸಿ.ಎಸ್., ವಿಶ್ವನಾಥ ಕಮ್ಮಾರ, ಅಶೋಕ ಪೂಜಾರಿ ಮತ್ತಿತರರಿದ್ದರು.
ಪ್ರಾಚೀನ ಪ್ರಾಥಮಿಕ ಶಾಲೆ: ಅಶೋಕ ನಗರದ ಶಿಶುವಿಹಾರ ಮತ್ತು ಪ್ರಾಚೀನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಜಿ.ಎಸ್. ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಶಿಕ್ಷಕಿ ಪುಷ್ಪಾ ನಾಡಿಗೇರ, ಮಾಲತೇಶಪ್ಪ ಎ.ಕೆ., ಶಾಲೆಯ ಶಿಕ್ಷಕರು ಸಿಬ್ಬಂದಿ ಇದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜ್: ನಗರದ ಹುಣಸಿಕಟ್ಟಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಾಂಶುಪಾಲ ಡಾ. ಎಸ್.ಕೆ. ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಬಸವರಾಜ ಹುಗ್ಗಿ, ಎಸ್.ಎಂ. ಸೀತಾಳದ, ಅರುಣಕುಮಾರ ಚಂದನ, ಡಾ. ಶೋಭಾ ಸಾವಕಾರ, ಡಾ. ವೆಂಕಟೇಶ ಎಚ್., ವಿ.ಬಿ. ಕುಂಬಾರ ಮತ್ತಿತರರಿದ್ದರು.
ಕೆಎಲ್‌ಇ ಕಾಲೇಜ್: ನಗರದ ಕೆ.ಎಲ್.ಇ. ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣು ಮಕ್ಕಳ ಸಂಯುಕ್ತ ಪದವಿ-ಪೂರ್ವ ಕಾಲೇಜ್‌ನಲ್ಲಿ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಡಾ. ನೀಲಕಂಠ ಮಾಗನೂರ, ಬಿ.ಎಸ್. ಪಟ್ಟಣಶೆಟ್ಟಿ, ಆರ್.ಜಿ. ಕುರವತ್ತಿ, ದೀಪಾ ಉಪ್ಪಿನ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ದೇವಿಕಾ ಕಾಲೇಜ್: ನಗರದ ದೇವಿಕಾ ಕಾಲೇಜ್‌ನಲ್ಲಿ ಆಡಳಿತ ಮಂಡಳಿ ಚೇರ್ಮನ್ ಸಿ.ಆರ್. ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲ ದಯಾನಂದ ಹರಿಹರ ಹಾಗೂ ಸಿಬ್ಬಂದಿ ಇದ್ದರು.
ಜೆಡಿಎಸ್ ಕಾರ್ಯಾಲಯ: ನಗರದ ಹಲಗೇರಿ ರಸ್ತೆಯ ಜೆಡಿಎಸ್ ತಾಲೂಕು ಕಚೇರಿಯಲ್ಲಿ ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣನವರ ಧ್ವಜಾರೋಹಣ ನೆರವೇರಿಸಿದರು. ತಾಲೂಕು ಅಧ್ಯಕ್ಷ ಮಹೇಶ ಹೊನ್ನಜ್ಜೇರ, ಶಿವು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸ್ನೇಹದೀಪ ಅಂಧರ ಸಂಸ್ಥೆ: ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ವಿಜಯಲಕ್ಷ್ಮೀ ಮುಂಡಾಸದ ಧ್ವಜಾರೋಹಣ ನೆರವೇರಿಸಿದರು. ಆರ್.ಆರ್. ಪಾಟೀಲ, ಸಂಸ್ಥೆಯ ಧರ್ಮದರ್ಶಿ ಕೆ.ಜಿ. ಮೋಹನ, ಡಾ. ಶಿವಕುಮಾರ ಗಡಾದ, ಸಂತೋಷ ಇತ್ತರರು ಉಪಸ್ಥಿತರಿದ್ದರು.
ಶಿವಾನಂದ ಕಾಲೇಜ್: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನಲ್ಲಿ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಅರಳಿ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಪಿ. ಮುನಿಯಪ್ಪ, ಪಿ.ಎಸ್. ತೆಂಬದ, ಎಚ್. ಶಿವಾನಂದ, ರೇಣುಕಾ ಗಳಗನಾಥ, ಪೂರ್ಣಿಮಾ ಮಾಗನೂರ, ಬಿ.ಎ. ವಿಜಯಕುಮಾರ ಮತ್ತಿತರರು ಇದ್ದರು.
ಬಿಎಜೆಎಸ್‌ಎಸ್ ಸಮೂಹ ಸಂಸ್ಥೆ: ನಗರದ ಬಿ.ಎ.ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಸೈನಿಕರಾದ ಬಸವರಾಜ ಕನ್ನಗೌಡ್ರ, ಚಂದ್ರಪ್ಪ ರಾಠೋಡ ಅವರನ್ನು ಸನ್ಮಾನಿಸಲಾಯಿತು. ಡಾ. ಸುರೇಶ ಬಣಕಾರ, ದೇವರಾಜ ಹಂಚಿಮನಿ, ಬಿ.ಯು. ಮಾಳೇನಹಳ್ಳಿ, ಡಾ. ರವೀಂದ್ರಕುಮಾರ ಬಣಕಾರ, ಪ್ರಕಾಶ ಬಸಪ್ಪನವರ, ಶ್ರೀಕಾಂತ ಕುಂಚೂರು, ಸಂತೋಷ ಬಂಜತ್ರಿ ಮತ್ತಿತರರಿದ್ದರು.
ಕರ್ನಾಟಕ ಸಂಘ: ನಗರದ ಕರ್ನಾಟಕ ಸಂಘದಲ್ಲಿ ಅಧ್ಯಕ್ಷ ಸಂಜೀವ ಶಿರಹಟ್ಟಿ ಧ್ವಜಾರೋಹಣ ನೆರವೇರಿಸಿದರು. ಪೃಥ್ವಿರಾಜ ಜೈನ, ಬದರಿನಾಥ ಪಂಪಣ್ಣನಾಯ್ಕ, ಸತ್ಯನಾರಾಯಣ ವಿಶ್ವರೂಪ, ಶ್ರೀನಿವಾಸ ಏಕಬೋಟೆ, ವಿಜಯಕುಮಾರ ಜೋಶಿ, ಕೊಟ್ರೇಶ್ ಎಮ್ಮಿ, ಕೃಷ್ಣ ಬತ್ತಲ, ಮಹೇಶ ನಾಡಿಗೇರ, ಸಂದೀಪ ರೂಪನಗುಡಿ, ಚಿದಂಬರ ಜೋಶಿ, ಸೀತಾರಾಮ ಕಣೇಕಲ್ಲ ಮತ್ತಿತರರಿದ್ದರು.