

ರಾಣೆಬೆನ್ನೂರ: ನಗರದ ಏಜು ಏಷಿಯಾ ವಲ್ಡ್ ಸ್ಕೂಲ್‌ನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ. 95.80ರಷ್ಟಾಗಿದೆ.
ಒಟ್ಟು 21 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ಉನ್ನತ ಶ್ರೇಣಿ, 11 ಪ್ರಥಮ ದರ್ಜೆ, 4 ದ್ವಿತೀಯ ದರ್ಜೆ ಹಾಗೂ 02 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಚರಣಾ ಎನ್.ಬಿ (ಶೇ.97.6) ತಾಲೂಕಿಗೆ ತೃತೀಯ ಹಾಗೂ ಶಾಲೆಗೆ ಪ್ರಥಮ, ಡಯಾನಾ ನ್ಯಾಮತಿ (ಶೇ.92.96) ದ್ವಿತೀಯ, ಬಿಂದು ಜಾಧವ (ಶೇ.92.16) ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.