ಮಾನವೀಯ ನಿರ್ಮಾಣವೇ ಶಿಕ್ಷಣದ ಗುರಿ; ಶ್ರೀ

10-RNR-08
Published on

ರಾಣೆಬೆನ್ನೂರ: ಪ್ರತಿಯೊಬ್ಬ ಮನುಷ್ಯರಲ್ಲಿಯೂ ಅನಂತವಾದ ಶಕ್ತಿ ಅಡಗಿದೆ. ಚಾರಿರ್ತ್ಯ ನಿಮಾರ್ಣ, ವ್ಯಕ್ತಿತ್ವ ನಿಮಾರ್ಣಕಾರಿ ಶಿಕ್ಷಣದಿಂದ ಮಾನವ ಏನನ್ನಾದರೂ ಸಾಧಿಸುವದಲ್ಲಿ ಸಾಧ್ಯವಿದೆ. ಶಿಕ್ಷಣವೆಂದರೆ ಕೇವಲ ಮಾಹಿತಿ ನೀಡುವಿಕೆಯಷ್ಟೇ ಅಲ್ಲ. ಮಾನವೀಯ ನಿಮಾರ್ಣವೆ ಶಿಕ್ಷಣದ ಶ್ರೇಷ್ಠ ಗುರಿ ಎಂದು ಗದಗ- ವಿಜಯಪುರದ ರಾಮಕೃಷ್ಣ- ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ವಿನಾಯಕ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಮಕೃಷ್ಣ- ವಿವೇಕಾನಂದ ಆಶ್ರಮದ 20ನೇ ವಾಷಿರ್ಕೋತ್ಸವದ ನಿಮಿತ್ತ ಏರ್ಪಡಿಸಿದ್ದ ಯುವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಲ್ಕಾರು ಪದವಿ ಪಡೆದವರಿಗೆ ಸಾಮಾನ್ಯ ಜ್ಞಾನ ಎಂಬುದು ಇರುವುದಿಲ್ಲ. ಫಿಸಿಕ್ಸ್​, ಎಕನಾಮಿಕ್ಸ್​, ಕೆಮಿಸ್ಟ್ರಿ ಅಂತಾ ಮಕ್ಕಳ ತಲೆಗೆ ತುಂಬಿ ಅವರ ಸಮಗ್ರ ವ್ಯಕ್ತಿತ್ವಕ್ಕೆ ಅಡ್ಡಿ ಮಾಡಲಾಗುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು. ನಮ್ಮ ಸರ್ಕಾರಗಳು ಇನ್ನೂ ಜಾಗೃತ ಆಗಿಲ್ಲ. ಹೀಗಾಗಿ, ಪ್ರಜ್ಞಾವಂತ ಸಮಾಜದವರೆ ಇಂತಹ ಧಾಮಿರ್ಕ ಕಾರ್ಯಕ್ರಮಗಳ ಆಯೋಜನೆಯ ಸದುದ್ದೇಶವನ್ನು ಮನಗಾಣಬೇಕು. ಸಮಾಜಕ್ಕೆ ಉಪಯುಕ್ತವಾದ ಆಲೋಚನೆ, ಯೋಜನೆಗಳನ್ನು ನೀಡಬೇಕು ಎಂದರು.

ನಗರದ ರಾಮಕೃಷ್ಣ -ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಾತನಾಡಿ, ನಗರದಲ್ಲಿ ರಾಮಕೃಷ್ಣ - ವಿವೇಕಾನಂದ ಆಶ್ರಮ ಕಳೆದ 20ವರ್ಷಗಳಿಂದ ಆಧ್ಯಾತ್ಮ, ಶಿಕ್ಷಣದ ಜತೆಗೆ ಯುವಕರಿಗೆ ವಿವೇಕಾನಂದರ ಸಂದೇಶಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿದೆ. ಸಮಾಜಕ್ಕೆ ಮಹಾತ್ಮರ ಸಂದೇಶಗಳು ಹಿಂದಿಗಿಂತ ಹೆಚ್ಚು ಅಗತ್ಯ ಇದೆ. ವಿವೇಕಾನಂದ ಸಂದೇಶಗಳು ಎಲ್ಲರನ್ನೂ ತಲುಪಬೇಕಿದೆ ಎಂದರು.

ಯುವಜನರ ಇಂದಿನ ಸವಾಲುಗಳಿಗೆ ವಿವೇಕ ಗುರುವಿನ ಪರಿಹಾರ ಎಂಬ ವಿಷಯ ಕುರಿತು ಯುವ ಬ್ರಿಗೇಡ್​ ಅಧ್ಯಕ್ಷ ಚಕ್ರವತಿರ್ ಸೂಲಿಬೆಲೆ ಉಪನ್ಯಾಸ ನೀಡಿದರು. ಹೊಸಪೇಟೆಯ ರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷ ಸ್ವಾಮಿ ಸುಮೇಧಾನಂದಜಿ ಮಹಾರಾಜ್​ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಗಂಗಾಧರಾನಂಜಿ ಮಹಾರಾಜ್​, ಜಗನ್ನಾಥಾನಂದಜಿ ಮಹಾರಾಜ್​, ಚೈತನ್ಯಾನಂದಜಿ ಮಹಾರಾಜ್​, ಗುರದೇವಚರಣಾನಂದಜಿ ಮಹಾರಾಜ್​, ಆತ್ಮ ದೀಪಾನಂದಜಿ ಮಹಾರಾಜ್​, ವಿನಯಾನಂದಜಿ ಮಹಾರಾಜ್​, ಅಭಯಾನಂದಜಿ ಮಹಾರಾಜ್​ ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net