

ಬೆಂಗಳೂರು: ಮಹಾರಾಷ್ಟ್ರ ಸರ್ಕಾರವು ಕರ್ನಾಟಕ ಗಡಿ ಭಾಗದ 865 ಹಳ್ಳಿಗಳಿಗೆ ಆರೋಗ್ಯ ವಿಮಾ ಯೋಜನೆ ಜಾರಿ ಮಾಡಿರುವುದನ್ನು ಖಂಡಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ.
ಬಸವರಾಜ್ ಬೊಮ್ಮಾಯಿ ಅವರೇ ಜನಮೆಚ್ಚುವ ಸದೃಡ ಆಡಳಿತವಂತೂ ನೀಡಲಾಗಲಿಲ್ಲ ಗಡಿ ಭಾಗದ ವಿಷಯದಲ್ಲಾದರೂ ಕಠಿಣ ಕ್ರಮಕೈಗೊಳ್ಳಿ. ಕೇಂದ್ರ,ರಾಜ್ಯದಲ್ಲೂ ನಿಮ್ಮದೇ ಡಬ್ಬಲ್ಇಂಜಿನ್ ಸರ್ಕಾರವಿದೆ ಮಹಾರಾಷ್ಟ್ರದಲ್ಲೂ ನಿಮ್ಮದೇ ಸರ್ಕಾರವಿದೆ.
ಚುನಾವಣಾ ಸಮಯದಲ್ಲಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ನರೇಂದ್ರ ಮೋದಿ ಅವರೇ ಇತ್ತ ಸ್ವಲ್ಪ ಗಮನ ಹರಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಿ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ.