

ನವದೆಹಲಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತು ಕ್ರಿಕೆಟಿಗರೊಂದಿಗಿನ ಸಂಪರ್ಕ ಮುಂದುವರೆದಿದ್ದು ಈ ಬಾರಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನ ಜೊತೆ ಅವರ ಹೆಸರು ಕೇಳಿ ಬಂದಿದೆ.
ಈ ಹಿಂದೆ ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ಮ್ಯಾನ್ ರಿಷಭ್ ಪಂತ್ ಜೊತೆ ನಟಿಯ ಹೆಸರು ಕೇಳಿ ಬಂದಿತ್ತು. ಈಗ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ನಸೀಮ್ ಷಾ ಊರ್ವಶಿ ರೌಟೇಲಾ ಅವರನ್ನು ಮದುವೆಯಾಗುವುದಾಗಿ ತಮ್ಮ ಆಸೆಯನ್ನು ಹೊರಹಾಕಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು ವಧು ಸಿದ್ದರಾಗಿದ್ದಾರೆ ನಾನು ಮದುವೆಗೆ ಸಿದ್ದನಾಗಿದ್ದೇನೆ ಎಂದು ಹೇಳುತ್ತಿರುವುದು ಕಂಡು ಬರುತ್ತದೆ. ಈ ಮೊದಲು ನಟಿಯ ಬಗ್ಗೆ ತಮಗೆ ಅಷ್ಠಾಗೊ ಗೊತ್ತಿಲ್ಲಾ ಎಂದು ಹೇಳುವ ಮೂಲಕ ನಸೀಮ್ ಸುದ್ಧಿಯಲ್ಲಿದ್ದರು.
ಈ ಹಿಂದೆ ನಟಿ ಪಾಕಿಸ್ಥಾನಿ ಕ್ರಿಕೆಟಿಗನ ಜನುಮ ದಿನದಂದು ಶುಭ ಹಾರೈಸುವ ಮೂಲಕ ಸುದ್ದಿಯಲ್ಲಿದ್ದರು ಮತ್ತು ನೆಟ್ಟಿಗರು ರಿಷಭ್ ನಹೀ ಹೈ ತೋ ನಸೀಮ್ ಹೈ ಸಬ್ ನಸೀಬ್ ಮೇ ಚಲೇಗಾ ಎಂದು ನಟಿಯ ಕಾಲೆಳೆದಿದ್ದರು. ಮತ್ತೊಂದೆಡೆ ಈ ವಿಡಿಯೋ ಕುರಿತು ಪರ ವಿರೋಧ ಚರ್ಚೆಯಾಗತ್ತಿದ್ದು ಇದು ಎಡಿಟ್ ಮಾಡಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಬಣ ಹೇಳಿದೆ.