ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸುತ್ತೀರಿ ಎಂದು ಕೇಳಿದ್ದಕ್ಕೆ ಸುರ್ಜೆವಾಲ ಹೇಳಿದ್ದಿಷ್ಟು

surjewala
Published on

ತುಮಕೂರು: ಇದೀಗ ಕಾಂಗ್ರೆಸ್​ಗೆ ಜನರಿಗೆ ನೀಡಿರುವ ಭರವಸೆಗಳನ್ನು ಹೇಗೆ ಪೂರೈಸುತ್ತೀರಿ ಎಂಬ ಪ್ರಶ್ನೆ ಕೇಳಲಾಗಿತ್ತು. ಅದರ ಕುರಿತಾಗಿ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ರಣ್​ದೀಪ್ ಸುರ್ಜೆವಾಲಾ ತಮ್ಮ ಭಾಷಣದಲ್ಲಿ ಉತ್ತರಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸುರ್ಜೆವಾಲ 'ಈ ಪ್ರಜಾಧ್ವನಿ ಯಾತ್ರೆ ಕೇವಲ ಕಾಂಗ್ರೆಸ್ ನ ಯಾತ್ರೆ ಅಲ್ಲ. ಇದು ರಾಜ್ಯದಲ್ಲಿ ಹೊಸ ಬದಲಾವಣೆಯನ್ನ ತರುವ ಸಲುವಾಗಿ ರೂಪಗೊಂಡಿರುವ ಯಾತ್ರೆ. ಈ ಯಾತ್ರೆಯ ಮೂಲಕ ನಾವು ಹಲವು ಗ್ಯಾರಂಟಿ ಗಳನ್ನ ಹೊತ್ತು ತಂದಿದ್ದೇವೆ. ಅದರಲ್ಲಿ ಈಗಾಗಲೇ ಎರಡು ಗ್ಯಾರಂಟಿಗಳು ರಿವೀಲ್ ಮಾಡಲಾಗಿದೆ.

ಮೊದಲನೆಯದು ಮಹಿಳೆಯರಿಗೆ 2000 ರೂಪಾಯಿ ನೀಡುವುದು. ಪ್ರತೀ ಮನೆಗೂ ಇನ್ನೊಂದು 200 ಯುನಿಟ್ ಉಚಿತ ವಿದ್ಯುತ್ ನೀಡುವುದು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾನ್ಯ ಜನರ ಮನೆಯ ಬಜೆಟ್ ಅನ್ನ ಹಾಳು ಮಾಡಿಬಿಟ್ಟಿದೆ. ಇನ್ನು ಸ್ವಲ್ಪ ದಿನ ಹೋದರೆ ನೀವು ಉಸಿರಾಡೋ ಗಾಳಿಯ ಮೇಲೂ ಜಿಎಸ್ಟಿ ಹಾಕುತ್ತಾರೆ.

ಬಿಜೆಪಿ ನಾಯಕರು ಪದೇ ಪದೇ ಇದಕ್ಕೆಲ್ಲ ನಿಮಗೆ ಹಣ ಎಲ್ಲಿ ಬರುತ್ತೆ ಅಂತಾ ಕೇಳ್ತಾರೆ. ನಾನು ಹೇಳ್ತಿನಿ ಕೇಳಿ, ರಾಜ್ಯದ ಈಗಿನ ಬಜೆಟ್ ಒಂದೂವರೆ ಲಕ್ಷ ಕೋಟಿ. ಮುಂದಿನ ದಿನಗಳಲ್ಲಿ 2 ಲಕ್ಷ ಕೋಟಿಗೂ ಹೆಚ್ಚಾಗುತ್ತೆ. ಅದರಲ್ಲಿ 40% ನೀವೇನು ಕಮಿಷನ್ ಪಡೀತಾ ಇದ್ದಿರಲ್ಲ. ಈ ಹಣ ಬರೋಬ್ಬರಿ 60 ಸಾವಿರ ಕೋಟಿ ರೂಪಾಯಿ ಆಗುತ್ತೆ. ಈ ಹಣದಲ್ಲಿ ನಮ್ಮ ಗ್ಯಾರಂಟಿಗಳನ್ನು ಈಡೇರಿಸುತ್ತೀವಿ' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net