

ರಣಬೀರ್ ಕಪೂರ್ ಹಾಗು ಆಲಿಯಾ ಭಟ್ ಮದುವೆಯಾಗಿ ಒಂದು ವರ್ಷ ಕಳೆದಿದ್ದು, ಈ ಜೋಡಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ರಣಬೀರ್ ಇಷ್ಟು ದಿನಗಳು ಆದಮೇಲೆ ಆಲಿಯಾ ಮದುವೆಯಾಗಲು ಇಷ್ಟವಿರಲಿಲ್ಲ. ನಾನು ಬೇರೊಬ್ಬ ನಟಿಯನ್ನು ಮದುವೆಯಾಗಲು ಬಯಸಿದ್ದೆ ಎಂದಿರೋದು ಇದೀಗ ಚ್ಚೆಯ ಸುದ್ದಿಯಾಗಿದೆ. ಣಬೀರ್ ನಿಜವಾಗಿಲು ಇಷ್ಟ ಪಟ್ಟು ಮದುವೆಯಾಗಲು ಬಯಸಿದ್ದು ಯಾರನ್ನ? ಅನ್ನೋದನ್ನ ನೋಡೋಣ.
ನಟ ರಣಬೀರ್ ಕಪೂರ್ ಹಾಗು ನಟಿ ಆಲಿಯಾ ಭಟ್ ಇಬ್ಬರು ಕಳೆದ ವರ್ಷ ಎಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿ ಹಲವು ವರ್ಷಗಳ ಕಾಲ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು.
ಈ ಜೋಡಿ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮದುವೆಯ ನಂತರ ಕೆಲವು ದಿನಗಳಲ್ಲಿ ಆಲಿಯಾ ಗರ್ಭಿಣಿ ಆಗಿದ್ರು.
ಈ ಹಿಂದೆ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಜೊತೆ ಕೂಡ ರಣಬೀರ್ ಕಪೂರ್ ಹೆಸರು ಕೇಳಿ ಬಂದಿತ್ತು. ಅನೇಕ ಬಾರಿ ಲವ್ ಫೇಲ್ಯೂರ್ ಆದ ಬಳಿಕ ರಣಬೀರ್ ಕಪೂರ್ ಆಲಿಯಾಳನ್ನು ಮದುವೆಯಾದರು ಎನ್ನುವ ಸುದ್ದಿ ಕೂಡ ಹಬ್ಬಿತ್ತು. ರಣಬೀರ್ ಆಲಿಯಾ ಅವರನ್ನು ಮದುವೆ ಆಗುವ ಮುಂಚೆ ಬೇರೆ ನಟಿಯೊಬ್ಬರನ್ನು ಮದುವೆಯಾಗಲು ಬಯಸಿದ್ದರಂತೆ.
ರಣ್ ಜೋಹರ್ ಅವರ ರಿಯಾಲಿಟಿ ಶೋ ಕಾಫಿ ವಿತ್ ಕರಣ್‌ನ ರಾಪಿಡ್ ಫೈರ್ ರೌಂಡ್‌ನ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಕರಣ್ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಇದೇ ವೇಳೆ ಕರಣ್ ರಣಬೀರ್ ಕಪೂರ್‌ಗೆ ಒಂದು ಪ್ರಶ್ನೆಯನ್ನು ಕೇಳಿದ್ದರು, ನೀವು ಇವರಲ್ಲಿ ಯಾರನ್ನು ಮದುವೆಯಾಗುತ್ತೀರಿ? ಅಂತ ಅನುಷ್ಕಾ, ಆಲಿಯಾ ಮತ್ತು ಜಾಕ್ವೆಲಿನ್ ಹೆಸರನ್ನು ಹೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ರಣಬೀರ್, ತಾನು ಅನುಷ್ಕಾಳನ್ನು ಮದುವೆಯಾಗಲು ಬಯಸಿದ್ದಾಗಿ ಹೇಳಿದ್ದರು.
ಅನುಷ್ಕಾಳನ್ನು ಮದುವೆಯಾಗುತ್ತೇನೆ ಆದರೆ ಅವಳು ಈಗಾಗಲೇ ಮದುವೆಯಾಗಿದ್ದಾರೆ. ಉಳಿದ ಇಬ್ಬರನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು. ಕಾಫಿ ವಿದ್ ಕರಣ್ ಶೋನಲ್ಲಿ ಹೇಳಿದ ಹಳೆಯ ಹೇಳಿಕೆ ಇದೀಗ ವೈರಲ್ ಆಗತೊಡಗಿದೆ.