ಬಲವಂತವಾಗಿ ರಣಬೀರ್‌ ಫೋಟೋ ತೆಗೆಯಲು ಯತ್ನಿಸಿದ ಯುವಕ; "ಖಾಸಗಿತನದ ಅರ್ಥ ಗೊತ್ತಿಲ್ಲ" ಎಂದ ಅಭಿಮಾನಿಗಳು

photo
Published on

ಮುಂಬೈ: ಮುಂಬೈನಲ್ಲಿ ಬೈಕ್ ಸವಾರನೊಬ್ಬನು ಬಾಲಿವುಡ್ ನಟ ರಣಬೀರ್ ಕಪೂರ್ ಸಮ್ಮತಿಯಿಲ್ಲದೆ ಫೋಟೋವನ್ನು ಕ್ಲಿಕ್ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಪಾಪರಜ್ಜಿ ವರೀಂದರ್ ಚಾವ್ಲಾ ಅವರ ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನೀಲಿ ಶರ್ಟ್‌ನ ಹುಡುಗನೊಬ್ಬ ಕಾರಿನ ಗ್ಲಾಸ್ ಮೂಲಕ ರಣಬೀರ್‌ನ ಫೋಟೋ ಬಲವಂತವಾಗಿ ತೆಗೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

ಆ ನಂತರ ರಣಬೀರ್ ಅವರ ಚಾಲಕ ಗ್ಲಾಸ್ ಕೆಳಗಿಳಿಸಿ ಹುಡುಗನನ್ನು ಮುಂದೆ ಹೋಗುವಂತೆ ಕೇಳಿಕೊಳ್ಳುವುದನ್ನು ಕಾಣಬಹುದು. ಬೈಕರ್ ನಂತರ ಚಾಲಕನಿಗೆ ಉತ್ತರಿಸಿ ಹೊರಡುತ್ತಾನೆ.

ವೈರಲ್ ವಿಡಿಯೋ ನೋಡಿದ ರಣಬೀರ್ ಅಭಿಮಾನಿಗಳು ಹಾಗೂ ನೆಟ್ಟಿಗರು "ಇದು ಅಕ್ಷರಶಃ ಕಿರುಕುಳ" ಎಂದು ಕಾಮೆಂಟ್ ಮಾಡಿದ್ದಾರೆ. "ಮೂರ್ಖ ಅಭಿಮಾನಿ. ಈ ಕಾರಣಕ್ಕಾಗಿ ಅಂಗರಕ್ಷಕರು ಈ ಹುಡುಗರನ್ನು ಹೊಡೆಯುವುದು", "ಕೆಲವರಿಗೆ ಖಾಸಗಿತನದ ಅರ್ಥವು ನಿಜವಾಗಿಯೂ ತಿಳಿದಿಲ್ಲ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಪ್ರಸ್ತುತ ರಣಬೀರ್ ಚಿತ್ರದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net