ಘರ್ಜಿಸಿದ ರಣಬೀರ್​ 'ಅನಿಮಲ್': ಮೂರನೇ ದಿನಕ್ಕೆ ಬಾಕ್ಸ್​​ ಆಫೀಸ್​ನಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವಿವರ

Untitled design (16)
Published on

ಮುಂಬೈ: ಬಾಲಿವುಡ್​ ನಟ ರಣಬೀರ್ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಅನಿಮಲ್ ಕಳೆದ ವಾರ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಭಾರತದಲ್ಲಿ ಚಿತ್ರವು 66 ಕೋಟಿ ರೂ. ಗಳಿಕೆ ಕಂಡಿದ್ದು, ಈ ವರ್ಷ ಹಿಂದಿ ಭಾಷೆಯ ಸಿನಿಮಾಗಳು ಮಾಡಿರುವ ದಾಖಲೆಯನ್ನು ಮುರಿಯುವಲ್ಲಿ ಮುಂಚೂಣಿಯಲ್ಲಿದೆ. ಇದೀಗ ಚಿತ್ರವು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಕಲೆಕ್ಷನ್ ಕಂಡಿದೆ ಎಂಬುದರ ವಿವರ ಹೀಗಿದೆ.

ಬಿಡುಗಡೆಗೂ ಮುನ್ನವೇ ಮುಂಗಡ ಬುಕ್ಕಿಂಗ್​ಗಳು ಅನಿಮಲ್​ ಮೇಲೆ ಭಾರೀ ನಿರೀಕ್ಷೆ ಹಾಗೂ ಭರವಸೆಯನ್ನು ಮೂಡಿಸಿದ್ದು, ಈ ಚಿತ್ರ ವೇಗವಾಗಿ 1000 ಕೋಟಿ ಕ್ಲಬ್​ ಸೇರಲಿದೆ ಎಂಬ ಲೆಕ್ಕಾಚಾರಗಳು ಕೇಳಿಬಂದಿತ್ತು. ವರದಿಗಳ ಪ್ರಕಾರ, ಅನಿಮಲ್ ಮೊದಲ ವಾರಾಂತ್ಯದಲ್ಲಿ ಕೇವಲ ಭಾರತದಲ್ಲೇ 130.07 ಕೋಟಿ ರೂ. ಸಂಗ್ರಹಿಸಿದೆ. ಈಗಾಗಲೇ 2ನೇ ದಿನವಾದ ಶನಿವಾರದಂದು ಜಾಗತಿಕವಾಗಿ ಉತ್ತಮ ಕೆಲಕ್ಷನ್ ಕಂಡ ಚಿತ್ರವು, ಶೀಘ್ರವೇ 200 ಕೋಟಿ ಕ್ಲಬ್‌ ಸೇರುವ ಮುನ್ಸೂಚನೆಯನ್ನು ಕೂಡ ಕೊಟ್ಟಿದೆ.

ವರದಿ ಪ್ರಕಾರ, ಅನಿಮಲ್ ಭಾರತದಲ್ಲಿ ಒಂದಷ್ಟು ಭಾಷೆಗಳಲ್ಲಿ 72.50 ಕೋಟಿ ಗಳಿಸಿದ್ದು, ಹಿಂದಿ ಪ್ರದರ್ಶನಗಳು 64.80 ಕೋಟಿ ರೂ. ಗಳಿಕೆ ಕಂಡಿದೆ. ಇದೀಗ ಮೂರನೇ ದಿನಕ್ಕೆ ಜಾಗತಿಕವಾಗಿ ಚಿತ್ರವು 130.07 ಕೋಟಿ ಸಂಗ್ರಹದೊಂದಿಗೆ ಅತ್ಯುತ್ತಮ ಆರಂಭವನ್ನು ಪಡೆದುಕೊಂಡಿದೆ. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬೇಬಿ ಡಿಯೋಲ್, ತ್ರಿಪ್ತಿ, ಪರಿಣಿತಿ ಚೋಪ್ರಾ, ಅನಿಲ್ ಕಪೂರ್ ಮುಂತಾದವರ ತಾರಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net